ಕೃಷಿ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಜೆ.ವಿ ಗೌಡರ ನಿಧನ

0
17

ಡಾ.ಜಗೇನಹಳ್ಳಿ ವಿರುಪನಗೌಡರ ಇಂದು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2-30 ಕ್ಕೆ ಹೊಸ ಬಸ್ ನಿಲ್ದಾಣದ ಹಿಂದೆ ಇರುವ ರುದ್ರಭೂಮಿಯಲ್ಲಿ ನೆರವೇರಲಿದೆ. ಧಾರವಾಡದ ಕೃಷಿ ವಿ ವಿ ಆವರಣದಲ್ಲಿ, ಗೌಡ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಇಂದು ಮುಂಜಾನೆ 11 ರಿಂದ 1-30 ರ ವರೆಗೆ ಅವರ ಅಭಿಮಾನಿಗಳು, ಶಿಷ್ಯರು, ಪಾರ್ಥಿವ ಶರೀರದ ದರ್ಶನ ಪಡೆಯಬಹುದಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ ಸೇವೆ ಸಲ್ಲಿಸಿದ್ದ, ಶ್ರೇಷ್ಠ ಶಿಕ್ಷಕ, ಶ್ರೇಷ್ಠ ವಿಜ್ಞಾನಿ, ಶ್ರೇಷ್ಠ ಆಡಳಿತಗಾರ ಮತ್ತು ಶ್ರೇಷ್ಠ ಮಾನವತಾವಾಧಿಯಾಗಿದ್ದ 88 ವರ್ಷದ ಡಾ. ಜೆ.ವಿ ಗೌಡರ ನಿಧನ ಹೋಂದಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಗಣ್ಯರು ಸಂತಾಪ ವಯಕ್ತಪಡಿಸಿದ್ದಾರೆ ಜೋಶಿಯವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಡಾ. ಜೆ.ವಿ ಗೌಡರ ನಿಧನ ಸುದ್ದಿ ತೀರ ನೋವಿನ ಸಂಗತಿ. ಡಾ. ಜೆ.ವಿ ಗೌಡರು ಐಎಆರ್‌ಐನಲ್ಲಿ ಭಾರತ ರತ್ನ ದಿವಂಗತ ಡಾ. ಎಮ್.ಎಸ್. ಸ್ವಾಮಿನಾಥನ್‌ರವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪೂರೈಸಿದ್ದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ, ವಿಜ್ಞಾನಿಯಾಗಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 50 ವಿದ್ಯಾರ್ಥಿಗಳು ಎಮ್.ಎಸ್ಸಿ. (ಕೃಷಿ) ಮತ್ತು 25 ವಿದ್ಯಾರ್ಥಿಗಳು ಪಿಎಚ್.ಡಿ. ಪದವಿಯನ್ನು ಇವರ ಮಾರ್ಗದರ್ಶನದಲ್ಲಿ ಪೂರೈಸಿದ್ದರು.

ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಆಡಳಿತದಲ್ಲಿ ಹಲವು ಸುಧಾರಣೆ ಮತ್ತು ಪಠ್ಯಕ್ರಮಗಳಲ್ಲಿ ಬದಲಾವಣೆ ಮಾಡುವುದರ ಜೊತೆಗೆ 304 ಶಿಕ್ಷಕರು ಮತ್ತು 258 ಶಿಕ್ಷಕೇತರ ಸಿಬ್ಬಂದಿಯನ್ನು ನೇಮಿಸಿ ಕೊಂಡಿದ್ದಾರೆ. ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಸುಧಾರಣೆಗಾಗಿ ರಾಷ್ಟ್ರ ಮಟ್ಟದ 12 ಸಮಿತಿಗಳ ಚೇರಮನ್ ಆಗಿ, 16 ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಡಾ.ಜಗೇನಹಳ್ಳಿ ವಿರುಪನಗೌಡರ ಇಂದು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2-30 ಕ್ಕೆ ಹೊಸ ಬಸ್ ನಿಲ್ದಾಣದ ಹಿಂದೆ ಇರುವ ರುದ್ರಭೂಮಿಯಲ್ಲಿ ನೆರವೇರಲಿದೆ.
ಧಾರವಾಡದ ಕೃಷಿ ವಿ ವಿ ಆವರಣದಲ್ಲಿ, ಗೌಡ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಇಂದು ಮುಂಜಾನೆ 11 ರಿಂದ 1-30 ರ ವರೆಗೆ ಅವರ ಅಭಿಮಾನಿಗಳು, ಶಿಷ್ಯರು, ಪಾರ್ಥಿವ ಶರೀರದ ದರ್ಶನ ಪಡೆಯಬಹುದಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Previous articleಅಂಬೇಡ್ಕರ್ ವಿರುದ್ಧ ನೆಹರು ಪ್ರಚಾರ ಮಾಡಿ ಅವರನ್ನು ಸೋಲಿಸಿದ್ದು
Next articleಸಾಲ ವಸೂಲಾತಿ: ಅಕ್ರಮವಾಗಿ ಮನೆ ಪ್ರವೇಶಿಸಿ ಕಿರುಕುಳ