ಕುರುವತ್ತಿ ದೇವಸ್ಥಾನದ ಅರ್ಚಕ ಅಮಾನತು

0
39

ಹೊಳಲು: ಸುಕ್ಷೇತ್ರ ಕುರುವತ್ತಿಯ ಶ್ರೀಬಸವೇಶ್ವರ ದೇವಸ್ಥಾನದ ಅರ್ಚಕ ಬಸಪ್ಪ ಪೂಜಾರ ಅವರನ್ನು ಅಮಾನತುಗೊಳಿಸಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಶಾಂತ ಪಟ್ಟಣಶೆಟ್ಟಿ ಆದೇಶ ಹೊರಡಿಸಿದ್ದಾರೆ.
ಕಳೆದ ಜು. ೨೮ರಂದು ಸುಕ್ಷೇತ್ರ ಕುರುವತ್ತಿಯ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳ ಆಶಯದ ಮೇರೆಗೆ ಅರ್ಚಕ ಬಸಪ್ಪ ಪೂಜಾರ ಇವರು ಬಸವಣ್ಣನ ಪಾದದಡಿಯಲ್ಲಿ ನಟ ದರ್ಶನ ಪೋಟೋ ಇರಿಸಿ ಪೂಜೆಗೈದಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಹೆಚ್. ಗಂಗಾಧರ ಇವರ ಮಾರ್ಗದರ್ಶನದಂತೆ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಶಾಂತ ಪಟ್ಟಣಶೆಟ್ಟಿ ಇವರು, ಅರ್ಚಕ ಬಸಪ್ಪ ಇವರು ದೇವಸ್ಥಾನದ ನಿಯಮಗಳಿಗೆ ಬದ್ಧರಾಗಿರದೇ ಕೊಲೆ ಆರೋಪದಡಿ ಜೈಲು ಸೇರಿರುವ ಆರೋಪಿಯ ಪೋಟೋವನ್ನು ದೇವಾಲಯದ ಒಳಗಡೆ ಇರಿಸಿ ಪೂಜೆಗೈಯುವ ಮೂಲಕ ಧಾರ್ಮಿಕ ಭಾವನೆಗೆ ದಕ್ಕೆ ಉಂಟುಮಾಡಿದ್ದಾರೆ ಎಂದು ಅರ್ಚಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Previous articleಹೊಟ್ಟೆನೋವು ತಾಳದೆ ವಿದ್ಯಾರ್ಥಿನಿ ಆತ್ಮಹತ್ಯೆ
Next articleಬಿಜೆಪಿಯಲ್ಲಿ ಮೂರು ಬಣ ಆಗಿವೆ