Home News ಕುರಿಗಾರನ ಮಗನಿಗೆ 623 ಅಂಕ

ಕುರಿಗಾರನ ಮಗನಿಗೆ 623 ಅಂಕ

ಕೋಲಾರ: ತಾಲೂಕಿನ ಕ್ಯಾಲನೂರು ಗ್ರಾಮದ ಕುರಿ ಕಾಯುವ ದಂಪತಿಯ ಪುತ್ರ ಕೆ.ಎಸ್. ತೇಜಸ್ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಗಳಿಸುವ ಮೂಲಕ ತಂದೆ ತಾಯಿಯ ಶ್ರಮಕ್ಕೆ ಗೌರವ ತಂದಿದ್ದಾನೆ.
ವೇಮಗಲ್ ಸಮೀಪದ ಸೀತಿ ಬಿಜಿಎಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತೇಜಸ್ ಕ್ಯಾಲನೂರು ಗ್ರಾಮದ ಬಡ ರೈತ ಶ್ರೀನಿವಾಸ್ ಮತ್ತು ರತ್ನಮ್ಮ ದಂಪತಿಯ ಪುತ್ರ. ಈತ ಕನ್ನಡ 125, ಇಂಗ್ಲಿಷ್ 98, ಹಿಂದಿ 100, ಗಣಿತ 100, ವಿಜ್ಞಾನ 100, ಸಮಾಜ ವಿಜ್ಞಾನ 100 ಅಂಕಗಳನ್ನು ಪಡೆದುಕೊಂಡಿದ್ದಾರೆ.
ನನಗೆ ಪೋಷಕರು ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದ್ದರು. ಅಪ್ಪ ಅಮ್ಮ ಶಿಕ್ಷಣ ವಂಚಿತರು. ಕುಟುಂಬ ಬಡತನದಲ್ಲಿ ಇದ್ದರೂ ನನ್ನ ಓದಿಗಾಗಿ ಶ್ರಮಿಸಿದ್ದಾರೆ. ನೀರಾವರಿ ಭೂಮಿ ಇಲ್ಲದಿದ್ದರು ಸಣ್ಣ ಪ್ರಮಾಣದಲ್ಲಿ ರೇಷ್ಮೆ ಬೆಳೆ ಹಾಗೂ 10 ಕುರಿಗಳನ್ನು ಮೇಯಿಸಿಕೊಂಡು ನನ್ನ ಮತ್ತು ನನ್ನ ಸಹೋದರಿಯ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿದ್ದಾರೆ ಎಂದು ತೇಜಸ್ ವಿವರಿಸಿದರು.

Exit mobile version