ಬಾಗಲಕೋಟೆ: ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ಭಾನುವಾರ ರಾತ್ರಿ ವ್ಯಕ್ತಿಯೊಬ್ಬನನ್ನು ದುರಳರು ಕೊಲೆ ಮಾಡಿದ್ದಾರೆ.
ಕೊಲೆಯಾದವನನ್ನು ಶರಣಪ್ಪ ಬಸಪ್ಪ ಜಮ್ಮನಕಟ್ಟಿ ಎಂದು ಗುರುತಿಸಲಾಗಿದೆ.
ಕುರಿಕಳ್ಳರಿಂದ ಕೊಲೆ: ಭಾನುವಾರ ರಾತ್ರಿ ಕುರಿಕಳ್ಳರು ಶರಣಪ್ಪನ ಕುರಿದಡ್ಡಿಗೆ ಲಗ್ಗೆ ಹಾಕಿದ್ದು ಕುರಿ ಕಳ್ಳರನ್ನು ಹಿಡಿಯಲು ತೆರಳಿದಾಗ ಮೂವರು ಕುರಿಗಳ್ಳರು ಸೇರಿ ಶರಣಪ್ಪನ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ ಸ್ಥಳಕ್ಕೆ ಕೆರೂರು ಪೋಲಿಸರು ಭೇಟಿ ನೀಡಿ ತನಿಖೆ ನಡಸುತ್ತಿದ್ದಾರೆ.