ಕುದುರೆ ಕೊಂದ ಮಾನಸಿಕ ಅಸ್ವಸ್ಥ

0
16

ಗದಗ: ಮಾನಸಿಕ ಅಸ್ವಸ್ಥನೋರ್ವ ಜಮೀನೊಂದರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುದುರೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಲ್ಲದೇ ತನ್ನ ತಂದೆ-ತಾಯಿಯ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಕಳೆದ ಮೂರು ವರ್ಷಗಳಿಂದ ಶಿವಪ್ಪ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಭಾನುವಾರ ಮಧ್ಯಾಹ್ನ ಗ್ರಾಮದ ಸಮೀಪದ ಹೊಲದಲ್ಲಿ ಕುರಿಗಾರರು ಕುರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುದುರೆಯನ್ನು ಕೊಡಲಿಯಿಂದ ಕೊಂದು ಮನೆಯಲ್ಲಿ ಅವಿತು ಕುಳಿತಿದ್ದಾನೆ. ಆಗ ಮಗನನ್ನು ಪ್ರಶ್ನಿಸಲು ಬಂದ ತಂದೆ ಷಣ್ಮುಕಪ್ಪ, ತಾಯಿ ಗೌರವ್ವಳ ಮೇಲೆ ಹಲ್ಲೆ ಮಾಡಿದ್ದಾನೆ.
ಭಯಭೀತರಾದ ಗ್ರಾಮಸ್ಥರು ೧೧೨ಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿಗೂ ಕೊಡಲಿ ತೋರಿಸಿ ಹೆದರಿಸಿ, ಹಲ್ಲೆ, ಯತ್ನ ಮಾಡಿದ್ದಾನೆ. ಸಂಚಾರಿ ಪೊಲೀಸ್ ಸಿಬ್ಬಂದಿ ಮಹೇಶ ಚಕ್ರಸಾಲಿ, ಎಸ್.ಡಿ.ಗೌಡರ, ಎಚ್.ಎಸ್.ಡೊಣ್ಣೆಗುಡ್ಡ ಅವರು ಶಿವಪ್ಪನನ್ನು ಜೀವ ಹಂಗನ್ನು ತೊರೆದು ಬಂಧಿಸಿದ್ದಾರೆ. ಆತನನ್ನು ಧಾರವಾಡದ ಡಿಮಾನ್ಸ್ಗೆ ಚಿಕಿತ್ಸೆಗೆ ಕಳುಹಿಸಿದ್ದಾರೆ.

Previous articleಆರ್ಥಿಕ ಇಲಾಖೆ ಅನುಮತಿ ಸಿಕ್ಕಿಲ್ಲ
Next articleಮಂಡ್ಯ: ಪ್ರವಾಸಿ ಸ್ಥಳಗಳ ಪ್ರವೇಶಕ್ಕೆ ನಿರ್ಬಂಧ