ಕುದುರೆಮುಖ ಕಂಪನಿ ಉಳಿಸಲು ಗಣಿಗಾರಿಕೆಗೆ ಅನುಮತಿ ನೀಡಲು ಒತ್ತಾಯ

0
37

ಬೆಂಗಳೂರು: ರಾಜ್ಯ ಸರಕಾರ ಅದಿರು ತೆಗೆಯಲು ಇದುವರೆಗೆ ಅನುಮತಿ ಕೊಡದ ಕಾರಣ ಕುದುರೆಮುಖ ಅದಿರು ಕಂಪನಿ ಮುಚ್ಚುವ ಸ್ಥಿತಿಯಲ್ಲಿದ್ದು ಸರಕಾರ ಸಾವಿರಾರು ನೌಕರರ ಅತಂತ್ರ ಸ್ಥಿತಿಗೆ ಕಾರಣವಾಗಬಾರದು ಎಂದು ಶಾಸಕರಾದ ಡಾ.ಭರತ್‌ ಶೆಟ್ಟಿಪೈ ಸದನದಲ್ಲಿ ಒತ್ತಾಯಿಸಿದ್ದಾರೆ.

ಕೆಐಒಸಿಎಲ್ 500 ಕೋಟಿ ಹಣ ಸರಕಾರಕ್ಕೆ ಕಟ್ಟಿದೆ. ಆದರೆ ಸರಕಾರದ ವಿಳಂಬ ನೀತಿಯಿಂದ ಕಂಪನ ಸುಪ್ರೀಂ ಕೋರ್ಟಿಗೆ ಹೋಗಿದೆ. ಇತ್ತ ಸರಕಾರ 3000 ಸಾವಿರ ಕೋಟಿ ದಂಡದ ಮಾತುಗಳನ್ನಾಡುತ್ತಿದೆ.ನೌಕರರಿಗೆ ಸಂಬಳ ಕೊಡಲೂ ಆಗದೆ ಸಂಕಷ್ಟದಲ್ಲಿರುವ ಕಂಪನಿಗೆ ಜೀವದಾನ ನೀಡಬೇಕಿದೆ. ಸರಕಾರ ತುರ್ತಾಗಿ ಸಭೆ ಕರೆದು ಕಂಪನಿ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಕೇಂದ್ರ ಗಣಿಗಾರಿಕೆ ಸಚಿವ ಕುಮಾರಸ್ವಾಮಿ ಅವರು ಕಂಪನಿ ಉಳಿವಿಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸಿದ್ದ ಎಂದು ಹೇಳಿದ್ದಾರೆ ಎಂದು ಸದನದ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಖಂಡ್ರೆ ಅವರು ಸಭೆ ಕರೆದು ಚರ್ಚಿಸುವ ಭರವಸೆ ನೀಡಿದರು.

Previous articleರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ ಪಡೆದ ರಾಜ್ಯ ಸರ್ಕಾರ
Next articleಸಾಧನೆ ಮಾತಾಡಬೇಕು, ಮಾತೇ ಸಾಧನೆಯಾಗಬಾರದು…