ಕುಂಭಮೇಳ: ಬೆಂಗಳೂರು-ಹುಬ್ಬಳ್ಳಿ-ಬನಾರಸ್‌ಗೆ ಏಕಮಾರ್ಗ ವಿಶೇಷ ರೈಲು

0
17

ಹುಬ್ಬಳ್ಳಿ: ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್(ಎಸ್ಎಂವಿಟಿ) ನಿಂದ ಬನಾರಸ್‌ಗೆ ಏಕಮಾರ್ಗ ವಿಶೇಷ ರೈಲನ್ನು ನೈಋತ್ಯ ರೈಲ್ವೆ ಓಡಿಸಲಿದೆ.

ಒನ್-ವೇ ವಿಶೇಷ ರೈಲು (06579) ಜನವರಿ 23ರಂದು ಮಧ್ಯಾಹ್ನ 1ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಜನವರಿ 25ರಂದು ಮಧ್ಯಾಹ್ನ 1.30ಕ್ಕೆ ತನ್ನ ಗಮ್ಯಸ್ಥಾನವಾದ ಬನಾರಸ್ ತಲುಪಲಿದೆ. ಈ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ರಾಣಿಬೆನ್ನೂರು, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಬೆಳಗಾವಿ, ಘಟಪ್ರಭಾ, ರಾಯಬಾಗ, ಮೀರಜ್, ಸಾಂಗ್ಲಿ, ಕಿರ್ಲೋಸ್ಕರವಾಡಿ, ಕರಾಡ್, ಸತಾರಾ, ಪುಣೆ, ಅಹ್ಮದ್ನಗರ, ಕೋಪರ್ಗಾಂವ್, ಮನ್ಮಾಡ್ ಭೂಸಾವಲ್, ಇಟಾರ್ಸಿ, ಜಬಲ್ಪುರ್, ಸತ್ನಾ, ಮಾಣಿಕ್ಪುರ್, ಪ್ರಯಾಗ್ರಾಜ್ ಛೋಕಿ, ಮಿರ್ಜಾಪುರ ಮತ್ತು ವಾರಣಾಸಿ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಒನ್ ವೇ ಸ್ಪೆಷಲ್‌ನಲ್ಲಿ 1 ಜನರಲ್ ಸೆಕೆಂಡ್ ಕ್ಲಾಸ್, 17 ಸ್ಲೀಪರ್ ಕ್ಲಾಸ್ ಮತ್ತು 2 ಜನರಲ್ ಲಗೇಜ್ ಮತ್ತು ದಿವ್ಯಾಂಗ ಸ್ನೇಹಿ ಕೋಚ್ ಸೇರಿದಂತೆ 20 ಬೋಗಿಗಳು ಇರಲಿವೆ ಎಂದು ನೈಋತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

Previous articleಬ್ಯಾಂಕ್‌ ದರೋಡೆ ಪ್ರಕರಣದ ಆರೋಪಿ ಕಾಲಿಗೆ ಗುಂಡು
Next articleಬೀದಿಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಮತ್ತಷ್ಟು ವಲಯ