ಕಿಮ್ಸ್‌ನಲ್ಲಿ ಐವಿಎಫ್, ಕ್ರಿಟಿಕಲ್ ಕೇರ್ ಯುನಿಟ್ ಶೀಘ್ರ ಸ್ಥಾಪನೆ

0
11

ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ(ಕಿಮ್ಸ್) ಶೀಘ್ರದಲ್ಲಿಯೇ ಐವಿಎಫ್ ಕೇಂದ್ರ ಹಾಗೂ ತುರ್ತು ನಿಗಾ ಘಟಕ(ಕ್ರಿಟಿಕಲ್ ಕೇರ್ ಯುನಿಟ್) ಸ್ಥಾಪನೆಯಾಗಲಿವೆ ಎಂದು ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್ ಕಮ್ಮಾರ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐವಿಎಫ್ ಕೇಂದ್ರವನ್ನು ಒಟ್ಟು ೧,೩೭ ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಕಲಬುರ್ಗಿಯ ಮಾನವೀಯ ಟ್ರಸ್ಟ್ ಹಾಗೂ ಹಟ್ಟಿ ಚಿನ್ನದ ಗಣಿ ನಿಗಮ(ಎಚ್‌ಜಿಎಂಎಲ್) ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ನಿಧಿಯಡಿ ಅನುದಾನ ದೊರಕಿಸಿದೆ. ಈ ಅನುದಾನದಡಿ ಐವಿಎಫ್ ಕೇಂದ್ರ ಸ್ಥಾಪನೆಗೆ ಯೋಜನೆ ಸಿದ್ಧವಾಗಿದೆ. ಟೆಂಡರ್ ಹಂತದಲ್ಲಿದೆ. ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಉತ್ತರ ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಸ್ಥಾಪನೆಯಾದ ಪ್ರಪ್ರಥಮ ಐವಿಎಫ್ ಕೇಂದ್ರವಾಗಲಿದೆ ಎಂದರು.
ಕೇಂದ್ರ ಸರಕಾರದ ೨೭ ಕೋಟಿ ರೂ. ಅನುದಾನದಲ್ಲಿ ೬೦ ಬೆಡ್‌ಗಳ ತುರ್ತು ನಿಗಾ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಿಮ್ಸ್‌ನಲ್ಲಿ ಲಿವರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಡಾ.ಎಸ್.ರಾಜಾಶಂಕರ, ಡಾ.ಈಶ್ವರ ಹೊಸಮನಿ, ಡಾ.ಸಿದ್ದೇಶ್ವರ ಕಟಕೋಳ, ಡಾ.ರಾಜಶೇಖರ ದ್ಯಾಬೇರಿ ಇದ್ದರು.

Previous articleರಾಜಕೀಯದಲ್ಲಿ ತಾಳ್ಮೆ ಮುಖ್ಯ
Next articleಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ