ಕಾಶ್ಮೀರದಲ್ಲಿ ಬಾಗಲಕೋಟೆಯ ೧೩ ಜನ ಸುರಕ್ಷಿತ

0
25

ಬಾಗಲಕೋಟೆ:ಜಮ್ಮು ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿರುವ ಬಾಗಲಕೋಟೆಯ ನಾಲ್ಕು ಕುಟುಂಬಗಳು ಸುರಕ್ಷಿತವಾಗಿವೇ.

ನಗರದ ಮಾರವಾಡಿಗಲ್ಲಿಯ ಕಿಶೋರ ಕಾಸಟ್, ಸೂರಜ್ ಕಾಸಟ್, ಗಿರೀಶ ಕಾಸಟ್, ನಿತೀಶ ಬಂಗ್ ದಂಪತಿ ಹಾಗೂ ಐವರು‌‌ ಮಕ್ಕಳು ಪ್ರವಾಸ ಕೈಗೊಂಡಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ.

ಮಂಗಳವಾರ ಉಗ್ರರ ದುಷ್ಕೃತ್ಯ ನಡೆಯುವ ಸಂದರ್ಭದಲ್ಲಿ ಈ ತಂಡ ಪಹಲ್ಗಾಂವ್ ನಲಿ ಇರಬೇಕಿತ್ತು ಆದರೆ ದಾರಿ ಮಧ್ಯ ಗುಡ್ಡ ಕುಸಿತ ಆದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳುವುದನ್ನು ಕೈ ಬಿಟ್ಟಿದ್ದರು.

ಸದ್ಯ ಶ್ರೀನಗರ ಬಳಿಯ ರಾಜೋರಿ ಪ್ರದೇಶದಲ್ಲಿರುವ ಕುಟುಂಬ ಜಮ್ಮು ಕಡೆ ಪ್ರಯಾಣ ಕೈಗೊಂಡಿದೆ. ಜಮ್ಮು ತಲುಪಿದ ನಂತರ ಬಾಗಲಕೋಟೆಗೆ ಈ ತಂಡ ವಾಪಸ್ ಅಗಲಿದೆ.

Previous articleವಿವಿಧೆಡೆ ಉಪ ಲೋಕಾಯುಕ್ತರ ಭೇಟಿ, ಪರಿಶೀಲನೆ
Next articleಕಾಶ್ಮೀರದಲ್ಲಿ ಚಿಕ್ಕಮಗಳೂರಿನವರು ಸುರಕ್ಷಿತ