ಪ್ರಯಾಗ್ ರಾಜ್: ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ ಆಕೆ ತಮ್ಮ ಹೆಸರನ್ನು ಕಮಲಾ ಎಂದು ಬದಲಾಯಿಸಿ ಕೊಂಡಿದ್ದಾರೆ. ಜ.೧೩ ರಿಂದ ೨೯ ರವರೆಗೆ ನಡೆಯಲಿರುವ ಮಹಾಕುಂಭದ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ನಿರಂಜನಿ ಅಖಾಡದ ಸ್ವಾಮಿ ಕೈಲಾಸಾನಂದ ಗಿರಿ ಜಿ ಮಹಾರಾಜ್ ಅವರೊಂದಿಗೆ ಪೊವೆಲ್ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದ ಸಂದರ್ಭದಲ್ಲಿ ಈ ರೀತಿ ಹೆಸರು ಬದಲಾವಣೆ ಮಾಡಲಾಗಿದೆ.
ಈ ಬಗ್ಗೆ ಸ್ವಾಮಿ ಕೈಲಾಸಾನಂದ ಪ್ರತಿಕ್ರಿಯಿಸಿ, ಪೊವೆಲ್ ತನ್ನ ಗುರುಗಳನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದಾರೆ. ಆಕೆ ನಮಗೆ ಮಗಳಿದ್ದಂತೆ. ಎರಡನೇ ಬಾರಿ ಅವರು ಭಾರತಕ್ಕೆ ಬಂದಿದ್ದಾರೆ. ಕುಂಭಮೇಳಕ್ಕೆ ಎಲ್ಲರಿಗೂ ಸ್ವಾಗತ ಎಂದಿದ್ದಾರೆ.