ಕಾಲ್ತುಳಿತ ದುರಂತದಲ್ಲಿ ಸರ್ಕಾರ ವೈಪಲ್ಯ

0
17

ಚಿಕ್ಕಮಗಳೂರು: ಬೆಂಗಳೂರಿನ ಕಾಲ್ತುಳಿತ ದುರಂತಕ್ಕೆ ಸಂಬಂಧಪಟ್ಟಂತೆ ಸರ್ಕಾರದ ವೈಪಲ್ಯ ಆಗಿರೋದು ನಿಜ, ಅದಕ್ಕೆ ರಾಜಿನಾಮೆ ನೀಡುವ ಅಗತ್ಯ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು
ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದಿನ ಸರ್ಕಾರಗಳಲ್ಲಿಯೂ ಕೂಡ ಸಾಕಷ್ಟು ಘಟನೆಗಳು ಸಂಭವಿಸಿವೆ ಆಗ ಯಾರು ರಾಜೀನಾಮೆ ಕೊಟ್ಟಿಲ್ಲ ಎಂದು ಹೇಳಿದರು. ಪಾಕಿಸ್ತಾನದ ಜೊತೆ ಯುದ್ಧ ನಡೆದಾಗ ಅಲ್ಲೂ ಕೂಡ ಕೇಂದ್ರ ಸರ್ಕಾರ ಫೇಲೂರು ಆಗಿತ್ತು. ಆದರೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಮೋದಿಯವರ ಜೊತೆ ನಿಂತು ರಾಜೀನಾಮೆ ಕೇಳಬಹುದಿತ್ತು ಆದರೆ ಅದು ಸರಿಯಾದ ಕ್ರಮ ಅಲ್ಲ ಎಂದರು, ಇಲ್ಲಿ ಬಿಜೆಪಿಯವರು ಕೂಡ ಅದೇ ಕ್ರಮವನ್ನ ಅನುಸರಿಸಬೇಕು ರಾಜೀನಾಮೆ ಎಲ್ಲದಕ್ಕೂ ಉತ್ತರ ಅಲ್ಲ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಬಿಜೆಪಿಗರಿಗೆ ತಿರುಗೇಟು ನೀಡಿದರು.

Previous articleಮರವಂತೆ ಬೀಚ್‌ನಲ್ಲಿ ಪ್ರವಾಸಿಗರ ರಕ್ಷಣೆ
Next articleಗೋವಿಂದರಾಜ್ ಎಸಗಿದ ತಪ್ಪೇನು ?