ಕಾಲವನ್ನು ತಡೆಯೋರ ಸವಾಲು

ಹುಬ್ಬಳ್ಳಿ: ಬೆಂಗಳೂರಿನ ಡಿಎಂಡಬ್ಲ್ಯೂ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ ಕನ್ನಡ ಚಲನಚಿತ್ರ ʼಕಾಲವೇ ಮೋಸಗಾರʼ ಸಿನಿಮಾ ಜೂನ್ ೨೦ ರಂದು ರಾಜ್ಯಾದಂತ ಬಿಡುಗಡೆಯಾಗಲಿದೆ ಎಂದು ನಟ ಭರತ್ ಸಾಗರ ಹೇಳಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಸಬರ ಚಿತ್ರವಾಗಿರುವ ಕಾಲವೇ ಮೋಸಗಾರ, ಲವ್, ಟ್ರೆಂಡ್, ಕಾಲದ ಪ್ರೀತಿ, ಸ್ವಾರ್ಥದ ಕುರಿತು ಯುವ ಸಮುದಾಯಕ್ಕೆ ಒಳ್ಳೇಯ ಸಂದೇಶ ನೀಡುವ ಕಥೆಯಾಗಿದೆ. ಕ್ಲಾಸ್, ಮಾಸ್, ಹಾಸ್ಯಭರಿತ ಕಥೆಯಾಗಿದ್ದು, ಕುಟುಂಬ ಸಮೇತ ನೋಡಬಹುದಾಗಿದೆ ಎಂದರು.
ಚಿತ್ರದಲ್ಲಿ ಕಮಲಿ ದಾರವಾಹಿಯ ನಟಿ ಯಶಸ್ವಿನಿ ರವೀಂದ್ರ, ಕುರಿ ಪ್ರತಾಪ್, ವಿಜಯ್ ಚೆಂಡೂರ್ ಸೇರಿದಂತೆ ತಾರಾಬಳಗವಿದೆ. ಥ್ರಿಲ್ಲರ್ ಮಂಜು ಸಾಹಸ, ಕೆ.ಲೋಕೇಶ ಸಂಗೀತ, ಕ್ರಾಂತಿಕುಮಾರ ಛಾಯಾಗ್ರಹಣ, ರಿತ್ವಿಕ್ ಸಂಕಲನವಿದೆ. ಸಂಜಯ್ ಪೌರಾಣಿಕ ನಿರ್ದೇಶನ ಮಾಡಿದ್ದಾರೆ ಎಂದರು.
ಚಿತ್ರದಲ್ಲಿ ಐದು ಹಾಡುಗಳು ಇದ್ದು, ಈಗಾಗಲೇ ಸದ್ದು ಮಾಡುತ್ತಿವೆ. ಸಿನಿಮಾ ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ. ರಾಜ್ಯಾದ್ಯಂತ ೫೦ ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ತೆರೆಗೆ ಬರಲಿದೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ ಮುತ್ತಣ್ಣವರ, ವಿಜಯಕುಮಾರ ಅಪ್ಪಾಜಿ, ಡೇವಿಡ್, ನಾಗರಾಜ್ ಉಪಸ್ಥಿತರಿದ್ದರು.