ಬಾಗಲಕೋಟೆ: ಕಾರು ಪಲ್ಟಿಯೊಡೆದು ಯುವಕನೋರ್ವ ಮೃತಪಟ್ಟಿರುವ ಘಟನೆ ಮಂಗಳವಾರ ತಡರಾತ್ರಿ ನಗರದಲ್ಲಿ ಜರುಗಿದೆ.
ವಿಶಾಲ್ ಅಲ್ಲಯ್ಯ ಸರಗಣಾಚಾರಿ(೨೭) ಮೃತ ಯುವಕ. ಹವೇಲಿ ಕ್ರಾಸ್ ಬಳಿ ರಸ್ತೆಯಿಂದ ಕಾರು ನೆಲಕ್ಕುರುಳಿದ್ದು, ಕಾರು ಚಲಾಯಿಸುತ್ತಿದ್ದ ವಿಶಾಲ್ ಅಸುನೀಗಿದರೆ ಕಾರಿನಲ್ಲಿದ್ದ ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಸಂಚಾರ ವಿಭಾಗದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.