ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟ ನಾಲ್ಕು ಮಕ್ಕಳು

0
21

ಅಮ್ರೇಲಿ: ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ಲಾಕ್ ಹಾಕಿದ ಕಾರಿನೊಳಗೆ ಆಟವಾಡುತ್ತಿದ್ದ ಮಕ್ಕಳು ಉಸಿರುಗಟ್ಟಿ ಸಾವಿಗೀಡಾಗಿವೆ. ಜಿಲ್ಲೆಯ ರಾಂಧಿಯಾ ಗ್ರಾಮದಲ್ಲಿ ಕಳೆದ ಶನಿವಾರ ಈ ಘಟನೆ ನಡೆದಿದೆ. ೨ ರಿಂದ ೭ ವರ್ಷದೊಳಗಿನ ಈ ಮಕ್ಕಳು ಲಾಕ್ ಹಾಕಿದ ಕಾರಿನೊಳಗೆ ಉಸಿರುಗಟ್ಟಿ ಸತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಮಕ್ಕಳ ಹೆತ್ತವರು ಭರತ್ ಮಂದಾನಿ ಕೃಷಿ ತೋಟದಲ್ಲಿ ಕೆಲಸ ಮಾಡಲು ಅಂದು ಬೆಳಗ್ಗೆ ೭.೩೦ರ ವೇಳೆಗೆ ಹೋಗಿದ್ದರು. ಆಗ ಅವರ ಏಳು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟುಹೋಗಿದ್ದರು. ಅವರಲ್ಲಿ ನಾಲ್ವರು ಮಕ್ಕಳು ಮನೆ ಸಮೀಪ ನಿಲ್ಲಿಸಿದ್ದ ತೋಟದ ಮಾಲೀಕನ ಕಾರಿನೊಳಗೆ ಹೋಗಿ ಆಟವಾಡುತ್ತಿದ್ದರು.
ಆದರೆ ಅಂದು ಸಂಜೆ ಮಕ್ಕಳ ಹೆತ್ತವರು ಹಾಗೂ ಮಾಲೀಕರು ವಾಪಸ್ ಬಂದಾಗ ಕಾರಿನೊಳಗೆ ಮಕ್ಕಳ ಮೃತದೇಹಗಳು ಕಂಡುಬಂದವು. ಅಮ್ರೇಲ್ ಪೊಲೀಸ್ ಠಾಣೆಯಲ್ಲಿ ಇದೊಂದು ಅಚಾನಕ್ ಆಗಿ ಸಂಭವಿಸಿದ ಘಟನೆ ಎಂದು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Previous articleಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ೯ ಸಾವು
Next articleಎಚ್‌ಎಸ್‌ಆರ್‌ಪಿ ಅಳವಡಿಕೆ ಅವಧಿ ಮತ್ತೆ ವಿಸ್ತರಣೆ