ಕಾಣದ ಕೈಗಳ ಬಗ್ಗೆ ತನಿಖೆಯಾಗಲಿ: ಜೋಶಿ

0
15

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಷಢ್ಯಂತ್ರ ರಚಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರ ವಯಸ್ಸು ಮತ್ತು ವರ್ಚಸ್ಸಿಗೆ ಗೌರವ ಕೊಡಬೇಕು. ಅವರ ಹೆಸರಿಗೆ ಮಸಿ ಬಳೆಯುವ ಉದ್ದೇಶದಿಂದ ವ್ಯವಸ್ಥಿತವಾಗಿ ಷಢ್ಯಂತ್ರ ಮಾಡಲಾಗಿದೆ. ಪೋಕ್ಸೋ ಪ್ರಕರಣ ಜೊತೆ ಜೊತೆಗೆ ಪ್ರಕರಣದ ಹಿಂದಿರುವ ಕಾಣದ ಕೈಗಳ ಬಗ್ಗೆಯೂ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುವಪಡೆಯ ಬೆಂಬಲ ಸಾಕಷ್ಟಿದೆ. ಅದನ್ನು ಇನ್ನಷ್ಟು ಹೆಚ್ಚಿಸಲು `ದೇಶಕ್ಕಾಗಿ ನನ್ನ ಮತ’ ಅಭಿಯಾನವನ್ನು ಚುರುಕುಗೊಳಿಸಲಾಗುತ್ತಿದ. ಶೇ.೯೦ರಷ್ಟು ಹೊಸ ಮತದಾರರು ಪ್ರಧಾನಿ ಮೋದಿ ಅವರ ಕಾರ್ಯ ವೈಖರಿಯಿಂದ ಪ್ರಭಾವಿತರಾಗಿದ್ದಾರೆ. ಹೀಗಾಗಿ ಬಿಜೆಪಿ ಕಳೆದ ಬಾರಿಗಿಂದ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಬೆಳಗಾವಿಯಿಂದ ಟಿಕೆಟ್ ಸಿಕ್ಕರೆ ನಮಗೆ ಅತ್ಯಂತ ಖುಷಿ ಎಂದರು.

Previous articleಬೆಂಗೇರಿಯಲ್ಲಿ ವಾಲ್ಮೀಕಿ ಭವನ
Next articleಬಿ.ಎಸ್. ಯಡಿಯೂರಪ್ಪ ತೇಜೋವಧೆ ಸರಿಯಲ್ಲ