ಕಾಡುಕೋಣ ಪ್ರತ್ಯಕ್ಷ‌

0
15

ಮಂಗಳೂರು: ನಗರದಲ್ಲಿ ಮತ್ತೆ ಕಾಡುಕೋಣ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಮೂಡಿದೆ.
ಮಂಗಳೂರು ನಗರದ ಕದ್ರಿ , ಕೈಬಟ್ಟಲು, ಕರಾವಳಿ ಲೇನ್ ಮತ್ತು ಸುತ್ತ ಮುತ್ತ ಪ್ರದೇಶದಲ್ಲಿ ದೈತ್ಯಗಾತ್ರದ ಕಾಡುಕೊಣ ರಾಜರೋಷವಾಗಿ ರಾತ್ರಿ ಹಗಲು ಸುತ್ತಾಡುತ್ತಿದ್ದು ಸ್ಥಳಿಯ ಜನ ಸಹಜವಾಗಿಯೇ ಆತಂಕ್ಕೀಡಾಗಿದ್ದಾರೆ. ಕೆಲ ಮನೆಗಳ ಕಂಪೌಂಡ್‌ಗಳನ್ನು ಹಾರಿ, ಕಬ್ಬಿಣದ ತಡೆ ಬೇಲಿಗಳಮ್ಮು ಮುರಿದು ಹಾಕಿದೆ. ರಾತ್ರಿ ವೇಳೆ ಕಾಡುಕೋಣಗ ಸಂಚಾರ ಜೋರಾಗಿಯೇ ಇದ್ದು ಸ್ಥಳೀಯ ಸಿಸಿಟಿವಿಯಲ್ಲಿ ಚಲನವಲನ ದಾಖಲಾಗಿದೆ. ಅರಣ್ಯ ಇಲಾಖಾ ಸಿಬಂದಿ ಮತ್ತು ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಕಾರ್ಯಚರಣೆ ನಡೆಸುತ್ತಿದ್ದಾರೆ. ಸೋಮವಾರ ಹಗಲಿನಲ್ಲಿ ಸಹ ಕೋಣ ಪರಿಸರದಲ್ಲಿ ಸುತ್ತಾಡುತ್ತಿರುವ ಬಗ್ಗೆ ಮಾಹಿತಿ ದೊರಕಿದ್ದು ಹೆಚ್ಚಾಗಿ ರಾತ್ರಿ ಹೊತ್ತು ಸಂಚರಿಸುವುದರಿಂದ ಅರಣ್ಯ ಇಲಾಖೆ ರಾತ್ರಿಗಾಗಿ ಕಾದು ಕಾರ್ಯಚರಿಸುತ್ತಿದೆ. ಮಂಗಳೂರು ನಗರ ಪಾಲಿಕೆಯ ಸ್ಥಳೀಯ ಸದಸ್ಯ ಮನೋಹರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಥಳಿಯರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

Previous articleಪ್ರತ್ಯೇಕ ಪ್ರಕರಣ- ಮೂವರ ಆತ್ಮಹತ್ಯೆ
Next articleಅಸ್ಥಿಪಂಜರದಂತಾಗಿರುವ ಓವರ್ ಹೆಡ್ ಟ್ಯಾಂಕ್