ಕಾಡಿನಲ್ಲಿ ನಾಡ ಬಂದೂಕು ಕಾರ್ಟ್ರೇಜ್‌ಗಳು ಪತ್ತೆ

ಚಿಕ್ಕಮಗಳೂರು: ನಕ್ಸಲ್ ರವೀಂದ್ರ ಜಿಲ್ಲಾಡಳಿತದ ಎದುರು ಶರಣಾದ ಬೆನ್ನಲ್ಲೇ ಕಾಡಿನಲ್ಲಿ 1 ನಾಡ ಬಂದೂಕು 10 ಕಾರ್ಟ್ರೇಜ್‌ಗಳು ಪತ್ತೆಯಾಗಿದೆ.

ಶೃಂಗೇರಿ ಸಮೀಪದ ಹುಲಗಾರುಬಯಲು ಅರಣ್ಯದಲ್ಲಿ ನಾಡ ಬಂದು ಪತ್ತೆಯಾಗಿದೆ. 1 ನಾಡ ಬಂದು 10 ಕಾಲಿ ಕಾಟ್ರೇಜ್ ಗಳು ಪತ್ತೆಯಾಗಿವೆ. ಕಳೆದ ಶನಿವಾರ ನಕ್ಸಲ್ ರವೀಂದ್ರ ಶರಣಾಗತಿಯಾಗಿದ್ದ.

ಶಸ್ತ್ರಾಸ್ತ್ರ ರಹಿತವಾಗಿ ನಕ್ಸಲ್ ರವೀಂದ್ರ ಶರಣಾಗತಿಯಾಗಿದ್ದ ಶರಣಾಗತಿಗೂ ಮೊದಲೇ ಕಾಡಿನಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗುತ್ತಿದೆ ಒಂದು ಬಂದೂಕು ಹತ್ತು ಕಾಲಿ ಕಾದ್ರೇಜ್ ಗಳನ್ನು ಪೊಲೀಸರು ಸದ್ಯಕ್ಕೆ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.