ಕಾಡಾನೆ ದಾಳಿಗೆ ಮತ್ತೋರ್ವ ಬಲಿ

0
11

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಚಿಕ್ಕಮಗಳೂರು ತಾಲೂಕು ಆಲ್ಲೂರು ಸಮೀಪದ ಕಂಚಿನಕಲ್ ದುರ್ಗಾ ಬಳಿ ಕೂಲಿ ಕಾರ್ಮಿಕರೊಬ್ಬರನ್ನು ಕಾಡಾನೆ ತುಳಿದು ಸಾಯಿಸಿದೆ.
ಆಲ್ಲೂರು ಹೋಬಳಿ, ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿನಕಲ್ ದುರ್ಗ ಸಮೀಪದ ಕೆಸುವಿನಕಲ್ ಕಾಫಿ ಎಸ್ಟೇಟ್ ನಲ್ಲಿ ಇಂದು ಮುಂಜಾನೆ ದುರ್ಘಟನೆ ನಡೆದಿದೆ.
ಕೂಲಿ ಕಾರ್ಮಿಕ ಆನಂದ ಪೂಜಾರಿ(55 ವರ್ಷ) ಕಾಡಾನೆ ದಾಳಿಯಿಂದ ಮೃತಪಟ್ಟವರು. ಭಾನುವಾರ ಮುಂಜಾನೆ ಆನಂದ ಪೂಜಾರಿ ಅವರು ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು ಕಾಡಾನೆ ದಾಳಿಯಿಂದ ಆನಂದ ಪೂಜಾರಿಯವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Previous articleಜನ ಚೇಂಜ್ ಕೇಳ್ತಾರೆ ಜೀ…
Next articleಗಂಡ-ಹೆಂಡತಿ ಜಗಳ: ಮೊಸಳೆ ಬಾಯಿಗೆ ಆರು ವರ್ಷದ ಮಗು