ಕಾಡಾನೆಗಳಿಂದ ಕೃಷಿ ಹಾನಿ

0
18

ಸುಳ್ಯ: ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಹೈದಂಗೂರು ಭಾಗದಲ್ಲಿ ಕಾಡಾನೆಗಳು ಕೃಷಿ ಹಾನಿ ಮಾಡಿದೆ. ರಾತ್ರಿಯ ವೇಳೆ ಹೈದಂಗೂರು ಸಮೀಪ ಬಂಡಿತ್ತಡ್ಕ ಎಂಬಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಬಾಳೆ, ತೆಂಗಿನ ಗಿಡ, ಅಡಿಕೆ ಗಿಡಗಳಗಳನ್ನು ನಾಶ ಮಾಡಿವೆ. ಅಲ್ಲದೇ ತೋಟಕ್ಕೆ ನೀರುಣಿಸುವ ಪೈಪ್‌ಗಳಿಗೂ ಹಾನಿ ಮಾಡಿದೆ. ಹೈದಂಗೂರು,ಬೊಳ್ಳಾಜೆ, ಕೊರತ್ತೋಡಿ ಭಾಗದ ಸಮೀಪದ ಕಾಡಿನಲ್ಲಿ ಎರಡು ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ನಿರಂತರ ಕೃಷಿ ಹಾನಿ ಮಾಡುತಿದೆ ಎಂದು ಕೃಷಿಕರು ಹೇಳುತ್ತಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೈದಂಗೂರು, ಕೊಡಪಾಲ ಭಾಗಗಳಲ್ಲಿ ಮತ್ತೆ ಕಾಡಾನೆ ಹಾವಳಿ ತೀವ್ರಗೊಂಡಿರುವುದು ಕೃಷಿಕರನ್ನು ಆತಂಕಕ್ಕೀಡು ಮಾಡಿದೆ.

Previous articleಜನಿವಾರ ತೆಗೆಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಪ್ರತಿಭಟನೆ
Next articleಬಪ್ಪನಾಡು ಜಾತ್ರೋತ್ಸವ ಮುರಿದ ರಥದ ಮೇಲ್ಭಾಗ: ತಪ್ಪಿದ ಅನಾಹುತ