ಕಾಂತಾರ-1 ಶೂಟಿಂಗ್‌ ವೇಳೆ ಯಾವುದೇ ಅವಘಡ ಸಂಭವಿಸಿಲ್ಲ: ಸ್ಪಷ್ಟನೆ

0
34

ಶಿವಮೊಗ್ಗ: ಕಾಂತಾರ-1 ಸಿನಿಮಾ ಶೂಟಿಂಗ್‌ ವೇಳೆ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ್‌ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಹೊಸನಗರ ತಾಲ್ಲೂಕಿನ ಯಡೂರು ಸಮೀಪದ ಮೇಲಿನ ಕೊಪ್ಪದ ಮಾಣಿ ಹಿನ್ನೀರಿನ ಪ್ರದೇಶದಲ್ಲಿ ಚಿತ್ರೀಕರಣಕ್ಕಾಗಿ ಶಿಪ್‌ ಸೆಟ್‌ ನಿರ್ಮಾಣ ಮಾಡಿದ್ದೆವು. ಗಾಳಿ-ಮಳೆಯಿಂದ ಸೆಟ್‌ ಮುಗುಚಿ ಹೋಗಿದೆ ಹೊರತು ಕಲಾವಿದರಿಗೆ ಏನೂ ಆಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಸೆಟ್ ಹಾಕಿದ ಸ್ಥಳದಿಂದ ನಾವು ತುಂಬಾ ದೂರದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ನಮ್ಮ ತಂಡದಲ್ಲಿ ಯಾರಿಗೂ-ಯಾವುದೇ ಅನಾಹುತವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದು ಇಂದು ಭಾನುವಾರವೂ ಸಹ ಚಿತ್ರೀಕರಣ ನಡೆಸಿದ್ದೇವೆ. ಅಲ್ಲದೇ ನಮ್ಮ ಕ್ಯಾಮೆರಾ ಮತ್ತು ಇತರೆ ಯಾವುದೇ ವಸ್ತುಗಳಿಗೂ ಕೂಡ ಹಾನಿಯಾಗಿಲ್ಲ. ಜಲಾಶಯ ಪಕ್ಕದಲ್ಲಿ ಯಾವುದೇ ಚಿತ್ರಿಕರಣ ಮಾಡಿಲ್ಲ ಎಂದು ತಿಳಿಸಿದರು.

Previous articleಸೇತುವೆ ಕುಸಿದು ನದಿಗೆ ಬಿದ್ದ ಪ್ರವಾಸಿಗರು: 15ಕ್ಕೂ ಹೆಚ್ಚು ಜನ ಕೊಚ್ಚಿಹೋದ ಶಂಕೆ
Next articleಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ: ತುರ್ತು ಅಧಿವೇಶನ ಕರೆಯುವಂತೆ ಆರ್‌. ಅಶೋಕ ಆಗ್ರಹ