Home Advertisement
Home ತಾಜಾ ಸುದ್ದಿ ಕಾಂಗ್ರೆಸ್ ಭಾರತದ ಪರವೋ, ಪಾಕಿಸ್ತಾನದ ಪರವೋ ಸ್ಪಷ್ಟಪಡಿಸಲಿ

ಕಾಂಗ್ರೆಸ್ ಭಾರತದ ಪರವೋ, ಪಾಕಿಸ್ತಾನದ ಪರವೋ ಸ್ಪಷ್ಟಪಡಿಸಲಿ

0
103

ದಾವಣಗೆರೆ: ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಖಂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹರಿಬಿಟ್ಟ ನಾಲಿಗೆಯಿಂದ ಹೊರಬಂದ ಹೇಳಿಕೆಯನ್ನು ಹಿಂಪಡೆಯಬೇಕು. ಸಿದ್ದರಾಮಯ್ಯ ಅವರ ಈ
ನಡವಳಿಕೆಯಿಂದ ರಾಜ್ಯದಲ್ಲಿ ಭಯೋತ್ಪಾದನೆ ಹೆಚ್ಚು ಆಗುತ್ತಿದೆ. ಹಿಂದೂ ವಿರೋಧಿ ಆಡಳಿತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಾಕಿಸ್ತಾನದ ಮಾಧ್ಯಮ ಕೂಡ ಸಿದ್ದರಾಮಯ್ಯ ಹೇಳಿಕೆ ವಿಜೃಂಭಿಸುತ್ತಿವೆ. ಕಾಂಗ್ರೆಸ್, ಸಿದ್ದರಾಮಯ್ಯ ಅವರ ಓಟು ಬ್ಯಾಂಕ್ ರಾಜಕಾರಣಕ್ಕೆ ಇದೊಂದು ತಾಜಾ ನಿದರ್ಶನ. ಜನರ
ರಕ್ಷಣೆಗಿಂತ ಓಟು ಬ್ಯಾಂಕ್ ರಾಜಕಾರಣ ಮುಖ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಕೇಂದ್ರ ಸರ್ಕಾರದ ತೀರ್ಮಾನಕ್ಕೆ ನೀವು ಬದ್ಧ ಆಗಿರಬೇಕು ಅಲ್ಲವೇ. ದ್ವಿಮುಖ ನೀತಿ ಕಾಂಗ್ರೆಸ್‌ನದ್ದು. ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಹೇಳಿಕೆ ನಡುವೆ ವ್ಯತ್ಯಾಸ ಇವೆ. ಪಹಲ್ಗಾಮ್ ಘಟನೆಯನ್ನು ಎಲ್ಲರೂ
ಪಕ್ಷಾತೀತವಾಗಿ ಖಂಡಿಸಬೇಕು. ಧರ್ಮದ ಆಧಾರದ ಮೇಲೆ ಹತ್ಯೆ ಮಾಡುವುದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದರು.
ಪಾಕಿಸ್ತಾನದ ನಿವಾಸಿಗಳು ಅಕ್ರಮವಾಗಿ ಕರ್ನಾಟಕದಲ್ಲಿ ನೆಲೆಸಿದ್ದಾರೆ. ಇವರನ್ನು ಒದ್ದು ಹೊರಗೆ ಹಾಕಬೇಕು. ಯೋಧರು ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದಾರೆ. ಅವರ
ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿ. ಭದ್ರತಾ ವೈಫಲ್ಯದ ಕುರಿತು ಟೀಕೆ ಮಾಡಬೇಡಿ. ಭಾರತ ಕ್ರಮ ಕೈಗೊಂಡರೆ ಪಾಕಿಸ್ತಾನ ಪುಡಿಪುಡಿ ಆಗುತ್ತದೆ. ದೇಶದ ಮುಸ್ಲಿಂ ಸಮುದಾಯ
ಉಗ್ರರ ಕೃತ್ಯ ಖಂಡಿಸಬೇಕೆಂದರು.
‘ಸಿಂಧೂ ನದಿ ನೀರು ಸ್ಥಗಿತ ಮಾಡಿದರೆ ರಕ್ತ ಹರಿಯುತ್ತದೆ’ ಎಂದು ಭುಟ್ಟೊ ನೀಡಿರುವ ಹೇಳಿಕೆ ಅಯೋಗ್ಯತನದಿಂದ ಕೂಡಿದೆ. ನರೇಂದ್ರ ಮೋದಿ ಅವರಿಗೆ ಭಯೋತ್ಪಾದನಾ ನಿರ್ಮೂಲನೆ ಮಾಡುವ ಬದ್ಧತೆ, ಇಚ್ಛಾಶಕ್ತಿ ಇದೆ. ಉಗ್ರರನ್ನು ಹುಡುಕಿ ಹೊಡೆಯುವುದು ನಿಶ್ಚಿತ ಎಂದರು.
ಪಾಕಿಸ್ತಾನ ವಿಶ್ವದ ಭೂಪಟದಿಂದ ನಿರ್ಮೂಲನೆ ಆಗಬೇಕು. ೨೪ ಗಂಟೆಯಲ್ಲಿ ಪಾಕಿಸ್ತಾನ ಇರದಂತೆ ಹೊಡೆದು ಹಾಕುವ ಶಕ್ತಿ ಭಾರತೀಯ ಸೇನೆಗೆ ಇದೆ. ಕಾಂಗ್ರೆಸ್ ಭಾರತದ ಪರವೋ,
ಪಾಕಿಸ್ತಾನದ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

Previous article“ಪಾಕಿಸ್ತಾನ ರತ್ನ” ಸಿಎಂ ಸಿದ್ದರಾಮಯ್ಯ, ರಾತ್ರೋರಾತ್ರಿ ವರ್ಲ್ಡ್ ಫೇಮಸ್
Next article2.56 ಲಕ್ಷ ಸರ್ಕಾರಿ ಹುದ್ದೆ ಖಾಲಿ, ನೇಮಕಾತಿಯೇ ಇಲ್ಲ!