Home Advertisement
Home ನಮ್ಮ ಜಿಲ್ಲೆ ಕಲಬುರಗಿ ಕಾಂಗ್ರೆಸ್ ಪಕ್ಷವೇ ಸಂವಿಧಾನಕ್ಕೆ ಅತಿ ಹೆಚ್ಚು ಬದಲಾವಣೆ ಮಾಡಿದೆ, ಬಿಜೆಪಿ ಅಲ್ಲ

ಕಾಂಗ್ರೆಸ್ ಪಕ್ಷವೇ ಸಂವಿಧಾನಕ್ಕೆ ಅತಿ ಹೆಚ್ಚು ಬದಲಾವಣೆ ಮಾಡಿದೆ, ಬಿಜೆಪಿ ಅಲ್ಲ

0
106

ಕಲಬುರಗಿ: ಸ್ವಾತಂತ್ರ್ಯ ಬಂದ ಬಳಿಕ ದೇಶದ ಸಂವಿಧಾನಕ್ಕೆ ಅತಿ ಹೆಚ್ಚು ಬದಲಾವಣೆ ಮಾಡಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಮೀಸಲಾತಿ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರುವ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರವಾಗಿ ಕಲಬುರಗಿ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸಂವಿಧಾನ ಬದಲಾವಣೆ ಮಾಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ, ಡಿಕೆಶಿ ಸಹಿತ ರಾಹುಲ್ ಗಾಂಧಿ ಹೇಳಿಕೆ ನೀಡಿ, ನಮ್ಮ ವಿರುದ್ಧ ಅಪಪ್ರಚಾರ ಮಾಡಿದ್ದರು. ಇದೀಗ ಡಿಸಿಎಂ ಡಿಕೆಶಿ ಹೇಳಿಕೆಯಿಂದ ಇವರ ಬಂಡವಾಳ ಬಯಲಾಗಿದೆ ಎಂದರು.

ಅಲ್ಪಸಂಖ್ಯಾತರ ಒಲೈಕೆಗಾಗಿ ಇವರು ಸಂವಿಧಾನ ಬದಲಾವಣೆ ಮಾಡ್ತೆವೆಂದು ಹೇಳಿದ್ದಾರೆ, ಅಂಬೇಡ್ಕರ್ ಅವರಿಗೆ ಇವರು ಎಷ್ಟು ಗೌರವ ಕೊಡ್ತಾರೆಂದು ಮತ್ತೆ ಗೋತ್ತಾಗಿದೆ, ಸಿದ್ದರಾಮಯ್ಯ, ಡಿಕೆಶಿ ಮುಸ್ಲಿಂರ ಒಲೈಕೆಗಾಗಿ ಹೇಳಿಕೆ ನೀಡುತ್ತಿರುವುದು ಸಂವಿಧಾನ ವಿರೋಧಿ ನೀತಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿಕೆಶಿ ಹೇಳಿಯನ್ನು ಖಂಡನೆ ಮಾಡ್ತೆನೆ , ಅದಕ್ಕೆ ಪ್ರಧಾನಿ ಮೋದಿ ಬಿಡೋದಿಲ್ಲ ದೇಶದಲ್ಲಿ ಶೋಷಿತ ಸಮುದಾಯದ ಮತಗಳನ್ನು ದುರುಪಯೋಗ ಮಾಡಿಕೊಂಡಿರೋದು ಕಾಂಗ್ರೆಸ್ ಪಕ್ಷವಾಗಿದೆ, ಡಿಸಿಎಂ ಡಿಕೆಶಿ ಹೇಳಿಕೆಯು ಡಿಕೆಶಿ ಹೇಳಿಕೆ ಅಲ್ಲ, ರಾಹುಲ್ ಗಾಂಧಿ , ಸಿದ್ದರಾಮಯ್ಯ ಮನಸ್ಥಿತಿಯ ಹೇಳಿಕೆ ಅದು ಎಂದಿದ್ದಾರೆ.

ಅಂಬೇಡ್ಕರ್ , ಸಂವಿಧಾನಕ್ಕೆ ಗೌರವ ಕೊಡುವ ಪಕ್ಷ ಬಿಜೆಪಿ, ಸಂವಿಧಾನವನ್ನು ತಮ್ಮ ಚಟಕ್ಕೆ ಬದಲಾವಣೆ ಮಾಡ್ತೇವೆ ಎಂದು ಹೇಳುತ್ತಿರುವುದು ಅಸಾಧ್ಯ. ದೇಶದ ಪ್ರಧಾನಿ ಮೋದಿ ಸಂವಿಧಾನಕ್ಕೆ ಮತ್ತು ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವ ಇರುವಾಗ ಇಂತಹವುಗಳಿಗೆ ಅವಕಾಶ ಕೋಡುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

Previous articleಜನಪರ ಹೋರಾಟಗಳಲ್ಲಿ ರಾಜಿ ಪ್ರಶ್ನೆಯೇ ಇಲ್ಲ
Next articleಸೈಬರ್ ವಂಚಕರ ಬಂಧನ