ಕಾಂಗ್ರೆಸ್‌ ಕಿವಿಗೆ ಹೂವಿಟ್ಟು, ಕೈಗೆ ಚಿಪ್ಪು ಕೊಟ್ಟಿದೆ

0
15

ಚಿಕ್ಕಮಗಳೂರು: ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ತೈಲ ಬೆಲೆ ಹೆಚ್ಚಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡಿಸಿ ಎಂಎಲ್‌ಸಿ ಸಿ.ಟಿ. ರವಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹನುಮಂತಪ್ಪ ವೃತ್ತದಲ್ಲಿ ಎಂಎಲ್‌ಸಿ ಸಿ.ಟಿ.ರವಿ ಹಾಗೂ ಬಿಜೆಪಿ ಕಾರ್ಯಕರ್ತರು ಕಿವಿ ಮೇಲೆ ದಾಸವಾಳ ಹೂವಿಟ್ಟುಕೊಂಡು, ಒಂದು ಕೈಯಲ್ಲಿ ಹೂವು, ಇನ್ನೊಂದು ಕೈಯಲ್ಲಿ ಚಿಪ್ಪು ಹಿಡಿದು ಪ್ರತಿಭಟನೆ ನಡೆಸಿದರು. ಪೆಟ್ರೋಲ್, ಡೀಸೆಲ್ ದರ ಏರಿಸುವ ಮೂಲಕ ರಾಜ್ಯ ಸರ್ಕಾರ ಜನರ ಕೈಗೆ ಚಿಪ್ಪು ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ವಾಹನ ಸವಾರರ ಕೈಗೆ ದಾಸವಾಳ ಹೂವು, ಚಿಪ್ಪು ಕೊಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಿ.ಟಿ.ರವಿ, ಸರ್ಕಾರ ಗ್ಯಾರಂಟಿ ಗ್ಯಾರಂಟಿ ಎನ್ನುತ್ತಾ ತೈಲ ಬೆಲೆ ಏರಿಸಿ, ಜನರ ಕಿವಿಗೆ ಹೂವಿಟ್ಟು ಕೈಗೆ ಗ್ಯಾರಂಟಿ ಚಿಪ್ಪು ಕೊಟ್ಟಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಸಂತೋಷ್ ಕೊಟ್ಯಾನ್, ನಗರಸಭಾ ಸದಸ್ಯರಾದ ಟಿ. ರಾಜಶೇಖರ್ ಹಾಗೂ ಮಧುಕುಮಾರ್ ನೇತೃತ್ವದಲ್ಲಿ ಹಲವರು ಭಾಗವಹಿಸಿದ್ದರು.

Previous articleಜಾಣರ ಗುರು
Next articleದರ ಏರಿಕೆ ಜನರಿಗೆ ಸರ್ಕಾರದಿಂದ‌ ಚೊಂಬು