ಕವಿವಿ ಆವರಣದಲ್ಲಿ ಚಿರತೆ ಪ್ರತ್ಯಕ್ಷ

0
17

ಧಾರವಾಡ: ಒಂದೆರೆಡು ಬಾರಿ ಧಾರವಾಡ ಹೊರ ವಲಯದಲ್ಲಿ ಕಾಣಿಸಿಕೊಂಡಿರುವ ಚಿರತೆ ಅಂತಹ ಪ್ರಾಣಿಗಳು ಇದೀಗ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಂಡು ಬಂದಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕ ವಿವಿಯ ಮುಖ್ಯ ರಸ್ತೆಯಿಂದ ಪತ್ರಿಕೋದ್ಯಮ ವಿಭಾಗಕ್ಕೆ ಹೋಗುವ ದಾರಿ ಮಧ್ಯೆ ಚಿರತೆಯೊಂದು ಗಾಂಧಿ ಭವನದ ಹಿಂಭಾಗದಿಂದ ಬೋಟೋನಿಕಲ್ ಗಾರ್ಡ್‌ನ ಒಳಗೆ ಓಡಿ ಹೋಗುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೈಕ್ ಮೇಲೆ ಒಬ್ಬರು ಈ ರಸ್ತೆಯಲ್ಲಿ ಸಂಚರಿಸುವ ವೇಳೆಯೇ ಮುಂದೆ ಚಿರತೆ ಓಡಿ ಹೋಗಿದ್ದು, ಬೈಕ್ ಸವಾರ ಭಯದಿಂದ ಅಲ್ಲಿಯೇ ನಿಂತಿದ್ದಾನೆ. ಕ್ಯಾಂಪಸ್‌ನಲ್ಲಿನ ಸಿಸಿ ಕ್ಯಾಮೆರಾದಲ್ಲಿ ಚಿರತೆ ಓಡುತ್ತಿರುವ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿರುವ ಈ ದೃಶ್ಯ ನೋಡಿ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳು, ಅಧ್ಯಾಪಕರು ಆತಂಕಕ್ಕೆ ಒಳಗಾಗಿದ್ದಾರೆ.
ಈ ರಸ್ತೆ ಮೂಲಕವೇ ನ್ಯೂ ಬಾಯ್ಸ್ ಹಾಸ್ಟೇಲ್ ವಿದ್ಯಾರ್ಥಿಗಳು, ಪತ್ರಿಕೋದ್ಯಮ, ಎಂಸಿಎ ವಿದ್ಯಾರ್ಥಿಗಳು ಕನಕ ಭವನ ಹಾಗೂ ಗ್ರಂಥಾಲಯಕ್ಕೆ ಹೋಗಲಾಗುತ್ತದೆ. ಈ ರಸ್ತೆ ಮೂಲಕವೇ ಚಿರತೆ ಹೋಗಿದ್ದು ಭಯ ಹುಟ್ಟಿಸಿದೆ.

Previous articleಪ್ರಸಾದಕ್ಕೆ ಪರವಾನಗಿ: ರಾಜ್ಯ ಸರ್ಕಾರದ್ದು ಹುಚ್ಚು ಆದೇಶ
Next articleಪ್ರವೀಣ್ ಕುಮಾರ್ ಚಿನ್ನದ ಜಿಗಿತ