ಕಳ್ಳರು ಕಳ್ಳರು ಒಂದಾಗಿದ್ದಾರೆ

0
10

ಮೈಸೂರು: ಕಳ್ರು ಕಳ್ರು ಒಂದಾಗಿದ್ದಾರೆ. ಗುಟ್ಟಾಗಿ ಸಭೆಗಳನ್ನು ನಡೆಸಿ ಸಂಚು ರೂಪಿಸುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿಲ್ಲ ಎಂಬ ಶಾಸಕ ಜಿಟಿ ದೇವೇಗೌಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಕಳ್ಳರು ಕಳ್ಳರು ಒಂದಾಗಿದ್ದಾರೆ. ತಮ್ಮ ರಕ್ಷಣೆಗಾಗಿ ಒಂದು ಕೂಟವನ್ನು ರಚನೆ ಮಾಡಿಕೊಂಡಿದ್ದಾರೆ, ಜಿಟಿ ದೇವೇಗೌಡರು 3 ತಿಂಗಳಿನಿಂದ ಏನು ಮಾಡುತ್ತಿದ್ದರು. ದಸರಾದಂತಹ ನಾಡಹಬ್ಬದ ಕಾರ್ಯಕ್ರಮದಲ್ಲಿ ಆ ರೀತಿ ಮಾತನಾಡಿದ್ದು ತಪ್ಪು. ಮುಡಾದಲ್ಲಿ ಜಿಟಿ ದೇವೇಗೌಡರ ಅಕ್ರಮವಿರಬಹುದು. ಆ ಕಾರಣಕ್ಕೆ ಎಲ್ಲರೂ ಒಂದಾಗಿದ್ದಾರೆ. ಮುಡಾ ಹಗರಣದಲ್ಲಿ ಜಿಟಿ ದೇವೇಗೌಡರ ಅಕ್ರಮವೂ ಇದೆ ಎಂದು ಆರೋಪ ಮಾಡಿದ್ದಾರೆ. ಅವರೂ ಕೂಡ ಹಗರಣದಲ್ಲಿ ಭಾಗಿಯಾಗಿರುವುದರಿಂದ ಸಿಎಂ ಪರ ನಿಂತಿದ್ದಾರೆ. ಕಳ್ರು ಕಳ್ರು ಒಂದಾಗಿದ್ದಾರೆ. ಗುಟ್ಟಾಗಿ ಸಭೆಗಳನ್ನು ನಡೆಸಿ ಸಂಚು ರೂಪಿಸುತ್ತಿದ್ದಾರೆ. ನಾನು ಕೇವಲ ಸಿದ್ದರಾಮಯ್ಯ ಅಲ್ಲ. ಇಡೀ ಅಕ್ರಮದ ವಿರುದ್ಧ ಹೋರಾಡುವೆ ಎಂದರು.

Previous articleಮೂರನೇ ಮಹಡಿಯಿಂದ ಜಿಗಿದ ಡೆಪ್ಯೂಟಿ ಸ್ಪೀಕರ್
Next articleಲಾರಿ – ಸ್ಕೂಟಿ ಅಪಘಾತದಲ್ಲಿ ಬೈಕ್ ಸವಾರ ಸಾವು