ಬೆಂಗಳೂರು: ಸರಕಾರದ ಅಂಕಿ ಅಂಶಗಳ ಪ್ರಕಾರ ವಿದ್ಯಾವಂತರು ಹೆಚ್ಚಿನ ನಿರುದ್ಯೋಗದ ಬಿಕ್ಕಟ್ಟು ಹೊಂದಿದ್ದಾರೆ, ಉದ್ಯೋಗಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಿರುದ್ಯೋಗದ ಬಿಕ್ಕಟ್ಟು ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು ನಿರುದ್ಯೋಗದ ಕುರಿತು ಸಿಟಿಗ್ರೂಪ್‌ನಂತಹ ಸ್ವತಂತ್ರ ಆರ್ಥಿಕ ವರದಿಗಳನ್ನು ಮೋದಿ ಸರ್ಕಾರ ತಿರಸ್ಕರಿಸುತ್ತಿರಬಹುದು, ಆದರೆ ಅದು ಸರ್ಕಾರದ ಡೇಟಾವನ್ನು ಹೇಗೆ ತಿರಸ್ಕರಿಸುತ್ತದೆ? ಕಳೆದ 10 ವರ್ಷಗಳಲ್ಲಿ ಕೋಟ್ಯಂತರ ಯುವಕರ ಕನಸುಗಳನ್ನು ಭಗ್ನಗೊಳಿಸಲು ಮೋದಿ ಸರ್ಕಾರ ಮಾತ್ರ ಕಾರಣವಾಗಿದೆ ಎಂಬುದು ಸತ್ಯ ಎಂದು ಅಂಕಿಅಂಶಗಳನ್ನು ವಿವರಿಸಿ ಪೋಸ್ಟ್ ಮಾಡಿದ್ದಾರೆ.