ಕಲುಷಿತ ನೀರು ಸೇವಿಸಿ ೧೭ ವಿದ್ಯಾರ್ಥಿಗಳು ಅಸ್ವಸ್ಥ

0
15

ಕಲಬುರಗಿ: ಜೇವರ್ಗಿ ಪಟ್ಟಣದ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥಗೊಂಡ ೧೭ ವಿದ್ಯಾರ್ಥಿಗಳಲ್ಲಿ ಏಳು ವಿದ್ಯಾರ್ಥಿಗಳಿಗೆ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲುಷಿತ ನೀರು ಮತ್ತು ಕಳಪೆ ಆಹಾರ ಸೇವಿಸಿರುವುದರಿಂದ ವಾಂತಿ ಭೇದಿ, ಹೊಟ್ಟೆ ನೋವು, ಎದೆ ಉರಿ ಕಾಣಿಸಿಕೊಂಡಿತ್ತು. ಶುಕ್ರವಾರ ಸಂಜೆಯೂ ಕೂಡ ಹಲವು ವಿದ್ಯಾರ್ಥಿಗಳಿಗೆ ಇದೇ ರೀತಿಯಾಗಿತ್ತು. ಶನಿವಾರ ಬೆಳಗ್ಗೆ ಆಲೂಬಾತ್ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಗೆ ಹಾಗೂ ವಸತಿ ನಿಲಯಕ್ಕೆ ತಾಲೂಕು ದಂಡಾಧಿಕಾರಿಗಳು, ಸರ್ಕಲ್ ಇನ್ಸಪೆಕ್ಟರ್ ಹಾಗೂ ಪಿಎಸ್‌ಐ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ.

Previous articleಶಾಲಾ ವಾಹನ ಹರಿದು ಬಾಲಕ ಸಾವು
Next articleಮುಖ್ಯಮಂತ್ರಿ ಕುರ್ಚಿ ಮಾರಾಟದ ವಸ್ತುವಲ್ಲ