ಕಲಬುರ್ಗಿ ಟ್ರಸ್ಟ್‌ಗೆ ಡಾ. ರಾಜೂರ ಅಧ್ಯಕ್ಷರಾಗಿ ನೇಮಕ

0
16

ಧಾರವಾಡ: ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮ ಸೇವೆ ಸಲ್ಲಿಸಿರುವ ಖ್ಯಾತ ವಿಮರ್ಶಕ ಡಾ. ಎಂ.ಎಂ. ಕಲಬುರ್ಗಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಟ್ರಸ್ಟ್‌ಗೆ ಡಾ. ವೀರಣ್ಣ ರಾಜೂರ ಅವರನ್ನು ಅಧ್ಯಕ್ಷರನ್ನಾಗಿ ಸರಕಾರ ನೇಮಿಸಿದೆ.
ಡಾ. ಎಂ.ಎಂ. ಕಲಬುರ್ಗಿ ಅವರ ಹೆಸರಿನಲ್ಲಿ ಪ್ರಾರಂಭಿಸಲಾದ ಟ್ರಸ್ಟ್‌ನಿಂದ ಸಂಶೋಧನೆ ಸೇರಿದಂತೆ ಇತರೆ ಕೆಲಸಗಳನ್ನು ನಡೆಸುವ ನಿಟ್ಟಿನಲ್ಲಿ ಟ್ರಸ್ಟ್ ಪ್ರಾರಂಭಿಸಿದ್ದು, ಕಲಬುರ್ಗಿ ಅವರ ಪುತ್ರ ಶ್ರೀವಿಜಯ ಕಲಬುರ್ಗಿ, ಸಾಹಿತಿ ಶಶಿಧರ ತೋಡಕರ, ಹನುಮಾಕ್ಷಿ ಗೋಗಿ, ಡಾ. ಎಚ್.ಎಸ್. ಮೇಲಿನಮನಿ, ಡಾ. ಬಾಳಣ್ಣ ಶೀಗಿಹಳ್ಳಿ, ಡಾ. ಸಿದ್ಧನಗೌಡ ಪಾಟೀಲ, ಪ್ರೊ. ಚಂದ್ರಶೇಖರ ವಸ್ತ್ರದ ಅವರನ್ನು ಸದಸ್ಯರನ್ನಾಗಿ ನೇಮಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಸರಕಾರದ ಅಧೀನ ಕಾರ್ಯದರ್ಶಿ ಎಸ್. ಗೀತಾಬಾಯಿ ಆದೇಶಿಸಿದ್ದಾರೆ.

Previous articleಎಣ್ಣೆ ಪಾರ್ಟಿ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು
Next article2040ರ ಹೊತ್ತಿಗೆ ಭಾರತ ಬಾಹ್ಯಾಕಾಶದ ಚಕ್ರವರ್ತಿ