Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆ

ಕಲಬುರಗಿಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆ

0

ಕಲಬುರಗಿ: ರೌಡಿಶೀಟರ್ ಒಬ್ಬನನ್ನು ಭೀಕರ ಹತ್ಯೆ ಮಾಡಿದ ಘಟನೆ ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದಲ್ಲಿ ನಡೆದಿದೆ.
ಪಟ್ಟಣ ಗ್ರಾಮದ ಸೋಮು ತಾಳಿಕೋಟಿ(40) ಎಂಬಾತನೇ ಕೊಲೆಯಾಗಿರುವ ರೌಡಿಶೀಟರ್. ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು ಆಳಂದ ರಸ್ತೆಯ ರೈಲ್ವೆ ಹಳಿ ಸಮೀಪ ಶವವನ್ನು ಬಿಸಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೌಡಿಶೀಟರ್ ಸೋಮು ತಾಳಿಕೋಟಿ ಕೆಲ ತಿಂಗಳ ಹಿಂದೆ ಪಟ್ಟಣ ಗ್ರಾಮದ ಧಾಬಾ ಮಾಲೀಕರೊಂದಿಗೆ ಗಲಾಟೆ ಮಾಡಿಕೊಂಡಿದ್ದನು. ಆ ಸಂದರ್ಭದಲ್ಲಿ ಧಾಬಾ ಮಾಲೀಕನನ್ನು ಸೋಮು ಆಂಡ್ ಗ್ಯಾಂಗ್ ಹಲ್ಲೆ ಮಾಡಿದ್ದರು. ಇದೇ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Exit mobile version