ಹುಬ್ಬಳ್ಳಿ: ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಇಲಾಖೆ ಹಾಗೂ ಐಆರ್‌ಸಿಟಿಸಿ ಸಹಯೋಗದಲ್ಲಿ “ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆ”ಯನ್ನು ಪ್ರಾರಂಭಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.
ಈ ವಿಶೇಷ ಪ್ರವಾಸ ರೈಲಿನಲ್ಲಿ, ಭಾರತೀಯ ಪೌರಾಣಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಕನ್ಯಾಕುಮಾರಿ, ತಿರುವನಂತಪುರA, ರಾಮೇಶ್ವರಂ ಮತ್ತು ಮಧುರೈ ಕ್ಷೇತ್ರಗಳನ್ನು ಒಳಗೊಂಡಿರುತ್ತವೆ.
ಪ್ರವಾಸದ ವಿವರಗಳು: ಯಾತ್ರೆ ಅವಧಿ: ೨೫ ಜೂನ್ ೨೦೨೫ ರಿಂದ ೩೦ ಜೂನ್ ೨೦೨೫ (೬ ದಿನಗಳು). ಪ್ರವಾಸ ದರ: ಪ್ರತಿ ಪ್ರಯಾಣಿಕರಿಗೆ ೧೫,೦೦೦/. ವಿಶೇಷ ಕೊಡುಗೆ: ಕರ್ನಾಟಕದ ನಿವಾಸಿ ಪ್ರಯಾಣಿಕರಿಗೆ ಸರ್ಕಾರದಿಂದ ೫,೦೦೦/- ಸಹಾಯಧನ (ವೈದ್ಯಕೀಯ ಪ್ರಮಾಣಪತ್ರ/ನಿವಾಸ ಪ್ರಮಾಣಪತ್ರ ಆಧಾರಿತ) ಲಭಿಸಲಿದೆ.
ಮುಖ್ಯ ದರ್ಶನ ಸ್ಥಳಗಳು: ಕನ್ಯಾಕುಮಾರಿ: ಭಗವತಿ ದೇವಿ ದರ್ಶನ ಮತ್ತು ವಿವೇಕಾನಂದ ಶಿಲಾಸ್ಮಾರಕ ತಿರುವನಂತಪುರA: ಪದ್ಮನಾಭಸ್ವಾಮಿ ದೇವಾಲಯ
ರಾಮೇಶ್ವರಂ: ರಾಮನಾಥಸ್ವಾಮಿ ದೇವಾಲಯ, ಮಧುರೈ: ಮೀನಾಕ್ಷಿ ದೇವಾಲಯ. ಹತ್ತುವ ಸ್ಥಳಗಳು: ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಎಸ್‌ಎಂವಿಟಿ ಬೆಂಗಳೂರು.
ಪ್ರಮುಖ ವೈಶಿಷ್ಟ್ಯಗಳು: ಭಾರತ ಗೌರವ್ ಪ್ರವಾಸ ರೈಲಿನಲ್ಲಿ ಎಸಿ III ಟೈರ್ ವಿಭಾಗದಲ್ಲಿ ಪ್ರಯಾಣ, ಕನ್ಯಾಕುಮಾರಿ ಮತ್ತು ರಾಮೇಶ್ವರಂನಲ್ಲಿ ಹವಾನಿಯಂತ್ರಿತವಲ್ಲದ ಕೊಠಡಿಗಳಲ್ಲಿ ಇಬ್ಬರು/ಮೂರು ಜನ ಹಂಚಿಕೊಂಡು ಒಂದು ರಾತ್ರಿ ವಾಸ್ತವ್ಯ, ಪ್ರವಾಸದ ಅವಧಿಯಲ್ಲಿ ಸಸ್ಯಾಹಾರಿ ಆಹಾರ ಒದಗಿಸಲಾಗುತ್ತದೆ, ಸ್ಥಳಾಂತರ ಮತ್ತು ಸ್ಥಳ ವೀಕ್ಷಣೆಗಳಿಗೆ ಹವಾನಿಯಂತ್ರಿತವಲ್ಲದ ಬಸ್ ಸೇವೆ ಪ್ರತಿಕೋಚ್‌ಗೆ ಪ್ರವಾಸ ಮಾರ್ಗದರ್ಶಕರು, ಪ್ರಯಾಣ ವಿಮೆ ಹಾಗೂ ರೈಲಿನಲ್ಲಿ Iಖಅಖಿಅ ವ್ಯವಸ್ಥಾಪಕರ ನೇತೃತ್ವ, ರೈಲಿನಲ್ಲಿ ಭದ್ರತಾ ವ್ಯವಸ್ಥೆ, ಎಲ್ಲಾ ಅನ್ವಯಿಸಬಹುದಾದ ತೆರಿಗೆಗಳು ಸೇರಿವೆ ಎಂದು ತಿಳಿಸಲಾಗಿದೆ,
ಬುಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸಂಪರ್ಕ ಸಂಖ್ಯೆ: ಬೆಂಗಳೂರು – ೯೩೬೩೪೮೮೨೨೯ / ೯೦೦೩೧೪೦೭೦೮ / ೯೦೦೩೧೪೦೭೧೦ / ೮೫೯೫೯೩೧೨೯೦ ಮೈಸೂರು – ೮೫೯೫೯೩೧೨೯೪ / ೯೭೩೧೬೪೧೬೧೧ ಹುಬ್ಬಳ್ಳಿ – ೮೫೯೫೯೩೧೨೯೩ / ೮೫೯೫೯೩೧೨೯೧