ಕರ್ನಾಟಕದಲ್ಲಿ ಮತ್ತೆ ಅದನ್ನು ನೆನಪಿಸುವ ಕ್ರಿಯೆ ಆರಂಭ

0
9

ಬೆಂಗಳೂರು: ಈ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ ಕರಾಳ ಇತಿಹಾಸ ನಿರ್ಮಿಸಿದ ಕಾಂಗ್ರೆಸ್, ಕರ್ನಾಟಕದಲ್ಲಿ ಮತ್ತೆ ಅದನ್ನು ನೆನಪಿಸುವ ಕ್ರಿಯೆ ಆರಂಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಕಲಬುರಗಿ ಪ್ರವೇಶಕ್ಕೆ ನಿರ್ಬಂಧ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕಾಂಗ್ರೆಸ್ ಸರ್ಕಾರ ಒಂದು ಕಡೆ ‘ಪಾಕಿಸ್ತಾನ್ ಜಿಂದಾಬಾದ್’ ಕೂಗುವ ದೇಶ ವಿದ್ರೋಹಿಗಳ ಬೆನ್ನಿಗೆ ನಿಂತರೆ ಮತ್ತೊಂದು ಕಡೆ ದೇಶ ಭಕ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಾಚಿಕೆಗೇಡಿನ ಕ್ರಮಕ್ಕೆ ಮುಂದಾಗಿದೆ.
ನಮೋ ಬ್ರಿಗೇಡ್ ಮೂಲಕ ರಾಷ್ಟ್ರೀಯ ವಿಚಾರಗಳನ್ನು ಪಸರಿಸುತ್ತಿರುವ ಚಿಂತಕ ಹಾಗೂ ಬರಹಗಾರ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕಲಬುರ್ಗಿ ಪ್ರವೇಶ ನಿರ್ಬಂಧಿಸಿ ಸ್ಥಳೀಯ ಆಡಳಿತ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಸೂಲಿಬೆಲೆಯವರ ಕಲಬುರ್ಗಿ ಪ್ರವೇಶಕ್ಕೆ ಇಂದು ತಡೆಯೊಡ್ಡಿರುವ ಘಟನೆ ಪ್ರಜಾ ಪ್ರಭುತ್ವ ವಿರೋಧಿ ಕ್ರಮವಾಗಿದ್ದು ಕಾಂಗ್ರೆಸ್ ಸರ್ಕಾರದ ಈ ದಮನಕಾರಿ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ ಕರಾಳ ಇತಿಹಾಸ ನಿರ್ಮಿಸಿದ ಕಾಂಗ್ರೆಸ್, ಕರ್ನಾಟಕದಲ್ಲಿ ಮತ್ತೆ ಅದನ್ನು ನೆನಪಿಸುವ ಕ್ರಿಯೆ ಆರಂಭಿಸಿದೆ ಎಂದಿದ್ದಾರೆ.

Previous articleಕನ್ನಡ ನಾಮಫಲಕ ಅಳವಡಿಕೆಗೆ ನೀಡಿದ್ದ ಗಡುವು ವಿಸ್ತರಣೆ
Next articleಕಾಂಗ್ರೆಸ್ ಸರ್ಕಾರದ ಲ್ಯಾಂಡ್ ಜಿಹಾದ್