ಕರ್ತವ್ಯ ಲೋಪ: ಮೂವರ ಅಮಾನತು

ದಾವಣಗೆರೆ: ಕರ್ತವ್ಯ ಲೋಪದ ಕಾರಣಕ್ಕೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಎಸ್ಪಿ ಉಮಾ ಪ್ರಶಾಂತ್ ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.
ಬಸವನಗರ ಠಾಣೆ ಎಚ್.ಸಿ.ಮಂಜಪ್ಪ, ಎಪಿಎಂಸಿ ಠಾಣೆ ಎಚ್.ಸಿ.ಚಂದ್ರಶೇಖರಪ್ಪ, ಪಿಸಿ ಪಿ.ಆಕಾಶ್ ಅಮಾನತಾದ ಸಿಬ್ಬಂದಿ.
ಜ.೨೯ರಂದು ಮಂಡಿಪೇಟೆಯ ಬೆಳ್ಳಿ ಬಂಗಾರದ ಅಂಗಡಿಯಲ್ಲಿ ಕಳ್ಳತನ ಆಗಿತ್ತು. ಈ ವೇಳೆ ವಾಹನ ತಪಾಸಣೆ ಮತ್ತು ವಿಶೇಷ ಗಸ್ತಿಗೆ ಸಿಬ್ಬಂದಿ ನೇಮಿಸಲಾಗಿತ್ತು. ಈ ವೇಳೆ ಈ ಮೂವರು ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ.