ದಾವಣಗೆರೆ: ನಗದು ವಹಿಯಲ್ಲಿ ತಪ್ಪು ನಮೂದು, ತಪಾಸಣೆ ನಡೆಸಿದ ವೇಳೆ ಅಸಹಕಾರ ಮತ್ತು ಅನಧಿಕೃತ ವ್ಯಕ್ತಿಯನ್ನು ಸಹಕಾರಕ್ಕಾಗಿ ನೇಮಿಸಿಕೊಂಡಿರುವ ಆರೋಪ ಮತ್ತು ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಮಹಾನಗರಪಾಲಿಕೆ ವಲಯ ಕಚೇರಿ-2ರ ದ್ವಿತೀಯ ದರ್ಜೆ ಸಹಾಯಕಿ ಎಚ್. ರೂಪಾ ಇವರನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಪಾಲಿಕೆಯಲ್ಲಿ ಎ ಖಾತಾ ಮತ್ತು ಬಿ ಖಾತಾ ಆಂದೋಲನದ ಪ್ರಗತಿ ಕುರಿತು ಶುಕ್ರವಾರ ಜಿಲ್ಲಾಧಿಕಾರಿ ಅವರು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಮಯದಲ್ಲಿ ವಲಯ ಕಚೇರಿ-2 ರಲ್ಲಿ ನಿರ್ವಹಿಸಲಾಗುತ್ತಿರುವ ನಗದು ವಹಿಯಲ್ಲಿ ನೌಕರಳು ತನ್ನ ಬಳಿ 500 ಇರುವುದೆಂದು ಘೋಷಿಸಿಕೊಂಡಿದ್ದರು, ಆದರೆ ತಪಾಸಣೆ ನಡೆಸಿದ ಸಮಯದಲ್ಲಿ ೩೬೦೦ ನಗದು ಇರುವುದು ಕಂಡುಬಂದಿದ್ದು, ಘೋಷಣೆಗಿಂತ ಹೆಚ್ಚಾಗಿರುವ ಹಣದ ಕುರಿತು ವಿವರಣೆ ನೀಡುವಲ್ಲಿ ಹಾಗೂ ತಪಾಸಣೆ ನಡೆಸಲು ಅಸಹಕಾರ ತೋರಿದ್ದಾರೆ ಅಲ್ಲದೇ ಅನಧಿಕೃತ ವ್ಯಕ್ತಿಯಿಂದ ತನ್ನ ಕರ್ತವ್ಯವನ್ನು ನಡೆಸುತ್ತಿರುವುದು ಕಂಡುಬಂದ ಹಿನ್ನೆಲೆ ಅವರನ್ನು ಅಮಾನತ್ತುಗೊಳಿಸಲಾಗಿದೆ.