ಕರ್ತವ್ಯನಿರತ ಚುನಾವಣೆ ಸಿಬ್ಬಂದಿ ಸಾವು

0
14

ಚಿತ್ರದುರ್ಗ: ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚುನಾವಣಾ ಸಿಬ್ಬಂದಿ ಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯಲ್ಲಿ ನಡೆದಿದೆ.
ಚಳ್ಳಕೆರೆ ಪಟ್ಟಣದ ವಿಠಲ ನಗರದ ನಿವಾಸಿ ಯಶೋಧಮ್ಮ(55) ಮೃತಪಟ್ಟವರೆಂದು ಗುರುತಿಸಲಾಗಿದೆ. ಎಲ್ಲ ಚುನಾವಣಾ ಸಿಬ್ಬಂದಿಯಂತೆ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯಶೋಧಮ್ಮ ಲೋ ಬಿಪಿಯಿಂದಾಗಿ ತಲೆ ಸುತ್ತು ಬಂದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರೊಳಗೆ ಅವರ ಮೃತಪಟ್ಟಿದ್ದಾರೆ.

Previous articleಬೆಂಗಳೂರಿನಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದ ಕುಮಾರಸ್ವಾಮಿ
Next articleಎರಡು ಬಾರಿ ಕೈ ಕೊಟ್ಟ ಮತಯಂತ್ರ: ಒಂದೂವರೆ ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತ