ಕರ್ತವ್ಯದಲ್ಲಿದ್ದ ಇಬ್ಬರು ಪೋಲಿಸರ ಮೇಲೆ ಮಾರಣಾಂತಿಕ ಹಲ್ಲೆ

0
10

ಸಿಂಧನೂರು (ರಾಯಚೂರು): ತಾಲೂಕಿನ ಗುಡುದೂರು ಗ್ರಾಮದಲ್ಲಿ ಸೋಮವಾರ ಸಂಜೆ ಕರ್ತವ್ಯದಲ್ಲಿದ್ದ ಇಬ್ಬರು ಪೋಲಿಸರ ಮೇಲೆ ಹಲ್ಲೆ ನಡೆದ ಘಟನೆ ನಡೆದಿದೆ.
ಮಂಜುನಾಥ ಮತ್ತು ಗೊಪಾಲ ಹಲ್ಲೆಗೊಳಗಾದ ಪೊಲೀಸರು. ಗುಡುದೂರು ಗ್ರಾಮದಲ್ಲಿ‌ ಅನುಮಾನಗೊಂಡು ದುರಗೇಶ, ಸಣ್ಣ ದುರಗೇಶ ವಿಚಾರಣೆ ನಡೆಸಲು ಮುಂದಾದಾಗ ಏಕಾಎಕಿ ಐದಾರು ಜನರು ಸೇರಿ, ಇವರ ಮೇಲೆ ಸಾರ್ವಜನಿಕ ಸ್ಥಳದಲ್ಲಿಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಕುರಿತ ಬಳಗಾನೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಗೊಳಗಾದ ಪೋಲಿಸರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ತಾಲೂಕ ಸಾರ್ವಜನಿಕ ಆಸ್ಪತ್ರೆ ದಾಖಲಿಸಲಾಗಿದೆ.

Previous articleಅಶ್ಲೀಲ ವೀಡಿಯೋ ಚಿತ್ರೀಕರಣ: ಆರೋಪಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಸ್ಥಳೀಯರು.
Next articleಮೋದಿ ಫಾರೆನ್ ಪಾಲಿಸಿಗೆ ಖರ್ಗೆ ಅಸಮಾಧಾನ