ದಾವಣಗೆರೆ: ಕಬಡ್ಡಿಗೆ ಚಾಲನೆ ನೀಡಲು ರೇಡಿಂಗ್‌ಗೆ ಹೋಗಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ ಆಯತಪ್ಪಿ ಮುಗ್ಗರಿಸಿ ಬಿದ್ದ ಘಟನೆ ನಡೆದಿದೆ.
ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ವಾಲಾಲ್ ಜಯಂತೋತ್ಸವ ಅಂಗವಾಗಿ ಕಬಡ್ಡಿ ಆಯೋಜನೆ ಮಾಡಲಾಗಿತ್ತು. ಕಬಡ್ಡಿಗೆ ಚಾಲನೆ ನೀಡಲು ರೇಡಿಂಗ್‌ಗೆ ಹೋಗಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ ಆಯತಪ್ಪಿ ಮುಗ್ಗರಿಸಿ ಬಿದ್ದಿದ್ದಾರೆ. ಕೂಡಲೇ ಆಟಗಾರರು ಹಾಗೂ ಇಲ್ಲಿದ್ದ ಜನರು ರುದ್ರಪ್ಪ ಲಮಾಣಿ ಮೇಲೆತ್ತಿದರು. ಅದೃಷ್ಟವಶಾತ್ ಗಂಭೀರ ಗಾಯವಾಗಿಲ್ಲ. ಕಾಲಿಗೆ ಸ್ವಲ್ಪ ಮಟ್ಟಿಗೆ ನೋವಾಗಿದೆ ಎಂದು ನಗುತ್ತ ತಿಳಿಸಿದರು, ಅಲ್ಲಿದ್ದ ಸಭಿಕರು ಅವರ ಕ್ರಿಡಾಸ್ಪೂರ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.