ಕಪ್ಪೆಚಿಪ್ಪು ಹೆಕ್ಕಲು ನದಿಗಿಳಿದಿದ್ದ ವ್ಯಕ್ತಿ ಸಾವು

0
17

ಉಳ್ಳಾಲ: ಕಪ್ಪೆಚಿಪ್ಪು ಹೆಕ್ಕಲು ನದಿಗಿಳಿದಿದ್ದ ವ್ಯಕ್ತಿಯೊಬ್ಬರು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಉಳ್ಳಾಲ ತಾಲೂಕಿನ ಹರೇಕಳ ಬೈತಾರ್ ಸಮೀಪ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಬೈತಾರ್ ನಿವಾಸಿ ವಿನೋದ್ ಗಟ್ಟಿ(40) ಮೃತಪಟ್ಟಿರುವ ದುರ್ದೈವಿ. ವಿನೋದ್ ಅವರು ಇಂದು ಬೆಳಗ್ಗೆ ಮನೆಯಿಂದ ಪಂಪ್‌ವೆಲ್ ಕಡೆಗೆ ಕೆಲಸಕ್ಕೆಂದು ತೆರಳಿದ್ದು, ಮಧ್ಯಾಹ್ನ ವೇಳೆ ವಾಪಸ್‌ ಬಂದಿದ್ದರೆನ್ನಲಾಗಿದೆ. ಮಧ್ಯಾಹ್ನ ವೇಳೆಗೆ ಅವರು ಮನೆಯ ಬಳಿ ನದಿ ನೀರಿಗೆ ಇಳಿದು ಕಪ್ಪೆ ಚಿಪ್ಪು ಹೆಕ್ಕುತ್ತಿದ್ದರು. ಈ ಸಂದರ್ಭ ಅವರ ಕಾಲು ನದಿಯ ಕೆಸರಿನಲ್ಲಿ ಹೂತು ಹೋಗಿದ್ದು, ಇದರಿಂದ ಅವರಿಗೆ ನೀರಿನಿಂದ ಮೇಲೆಳಲು ಸಾಧ್ಯವಾಗದೆ ಸ್ಥಳದಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಮೈಕ್ರೋ ಕ್ರೌರ್ಯ ಬೀದಿಗೆ ಬಂದ ಕುಟುಂಬ
Next articleಇಂದಿನಿಂದ ಕರುನಾಡಲ್ಲಿ ದಕ್ಷಿಣ ಭಾರತದ ಐತಿಹಾಸಿಕ 13ನೇ ಕುಂಭಮೇಳ