ಕಪ್ಪತ್ ಗುಡ್ಡದ ಜೀವ ವೈವಿದ್ಯತೆ ಕಾಪಾಡಬೇಕು

0
27

ಗದಗ: ಜಿಲ್ಲೆಯ ಕಪ್ಪತ್ ಗುಡ್ಡದ ಜೀವ ವೈವಿಧ್ಯತೆಯಲ್ಲಿ ಅಸಮತೋಲನ ಉಂಟಾಗಿದ್ದು ಅದನ್ನು ಸರಿಪಡಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕೆಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ವನ್ಯ ಜೀವಿ ಮಂಡಳಿ ಸಭೆ ಮಾಡಿದಾಗ ನಿಸರ್ಗವನ್ನು ಕಾಪಾಡುವ ಕೆಲಸವನ್ನು ಮಾಡಬೇಕು ಎಂದು ಹೇಳಿದ್ದೆ, ಈಗಲೂ ಕೂಡ, ಮುಖ್ಯಮಂತ್ರಿ ಕಪ್ಪತ ಗುಡ್ಡದ ಜೀವ ವೈವಿಧ್ಯತೆ ಕಾಪಾಡಲು ಗಣಿಗಾರಿಕೆಯಂತ ಚಟುವಟಿಕೆ ನಡೆಯಲು ಅವಕಾಶ ಕೊಡದೇ ಈ ಭಾಗದ ಮೂರುನಾಲ್ಕು ಜಿಲ್ಲೆಯ ಪರಿಸರ ಕಾಪಾಡುವ ತೀರ್ಮಾನ ಮಾಡಬೇಕೆಂದು ಹೇಳಿದರು.

Previous articleಆಡಳಿತ ಪಕ್ಷದವರೆ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ
Next articleಮುರುಘಾ ಶ್ರೀ ಬಿಡುಗಡೆಗೆ ಆದೇಶ