ಕನ್ನಡ ನೆಲದಲ್ಲಿಯೇ ಕನ್ನಡ ಮಾತಾಡು ಅಂದಿದ್ದಕ್ಕೆ ಕಂಡೆಕ್ಟರ್‌ಗೆ ಥಳಿತ

0
24

ಬೆಳಗಾವಿ: ಕನ್ನಡ ಮಾತಾಡು ಅಂದಿದ್ದಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆಲ ಮರಾಠಿ ಭಾಷಿಕ ಪುಂಡರು ಹಲ್ಲೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಸುಳೇಭಾವಿ-ಬಾಳೇಕುಂದ್ರಿ ಗ್ರಾಮದ ಮಧ್ಯೆ ನಡೆದಿದೆ.
ಚಲಿಸುತ್ತಿದ್ದ ಬಸ್ ನಿಲ್ಲಿಸಿ ಬಸ್ ಕಂಡೆಕ್ಟರ್ ಮಹಾದೇವ್ ಹುಕ್ಕೇರಿ ಮೇಲೆ 20ಕ್ಕೂ ಹೆಚ್ಚಿದ್ದ ಪುಂಡರ ಗುಂಪು ಹಲ್ಲೆ ಮಾಡಿದೆ. ಬಸ್‌ನಲ್ಲಿದ್ದ ಯುವತಿ ಎರಡು ಟಿಕೆಟ್ ಕೊಡು ಎಂದು ಮರಾಠಿಯಲ್ಲಿ ಕೇಳಿದಾಗ ನಿರ್ವಾಹಕ ಮಹಾದೇವ್ ನನಗೆ ಮರಾಠಿ ಬರಲ್ಲ. ಕನ್ನಡದಲ್ಲಿ ಹೇಳಿ ಎಂದಿದ್ದಕ್ಕೆ ಪುಂಡರು ಹಲ್ಲೆ ಮಾಡಿದ್ದಾರೆ.
ಇಲ್ಲಿ ನಿರ್ವಾಹಕ ಮರಾಠಿ ಬರಲ್ಲ ಎನ್ನುತ್ತಿದ್ದಂತೆ ಚಲಿಸುತ್ತಿದ್ದ ಬಸ್ ನಿಲ್ಲಿಸಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದವರು ಪಂತಬಾಳೆಕುಂದ್ರಿ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಹಲ್ಲೆಗೊಳಗಾದ ಬಸ್ ನಿರ್ವಾಹಕ ಮಹಾದೇವ್ ಮಾರಿಹಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಕನ್ನಡದ ನೆಲದಲ್ಲಿಯೇ ಕನ್ನಡ ಮಾತಾಡು ಎಂದಿದ್ದಕ್ಕೆ ಹಲ್ಲೆ ಮಾಡಿರುವುದನ್ನು ಕನ್ನಡಪರ ಸಂಘಟನೆಗಳು ಖಂಡಿಸಿವೆ. ಅಷ್ಟೇ ಅಲ್ಲ ಹಲ್ಲೆ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಕನ್ನಡಿಗರು ಒತ್ತಾಯಿಸಿದ್ದಾರೆ.

Previous articleಬೆಂಗಳೂರ ಸಿಂಗಾಪುರ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದವರು ಈಗ…
Next articleಟಾಸ್‌ ಗೆದ್ದು RCBಗೆ ಬ್ಯಾಟ್‌ ನೀಡಿದ ಮುಂಬೈ ಇಂಡಿಯನ್ಸ್