ಕನ್ನಡಿಗರು ಶ್ರಮದಿಂದ ಕಟ್ಟಿದ ಪ್ರತಿ ಸರ್ಕಾರಿ ಸಂಸ್ಥೆ ಲಾಭದ ಹಳಿಗೆ

0
16

ಬೆಂಗಳೂರು: ಕನ್ನಡಿಗರು ಶ್ರಮದಿಂದ ಕಟ್ಟಿದ ಪ್ರತಿ ಸರ್ಕಾರಿ ಸಂಸ್ಥೆಯನ್ನು ಲಾಭದ ಹಳಿಗೆ ತರಲು ನಾವು ಬದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ 2023ರ ಡಿಸೆಂಬರ್ ನಲ್ಲಿ ಒಟ್ಟು 852 ಟನ್ ಮಾರ್ಜಕ ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿ 40 ವರ್ಷಗಳಲ್ಲೇ ಹೊಸ ದಾಖಲೆ ನಿರ್ಮಿಸಿದೆ.
ಈ ಆರ್ಥಿಕ ವರ್ಷದ 9 ತಿಂಗಳುಗಳಲ್ಲೇ ಒಟ್ಟು ರೂ. 1,171 ಕೋಟಿ ವಹಿವಾಟು ನಡೆಸಿರುವುದು ಅಮೋಘ ಸಾಧನೆಯಾಗಿದೆ. ಒಂದೇ ಪಾಳಿಯಲ್ಲಿ ಹಾಗೂ ಒಂದು ಯಂತ್ರದ ಮೂಲಕ ನಡೆಯುತ್ತಿದ್ದ ಉತ್ಪಾದನೆಯನ್ನು ಮೂರು ಪಾಳಿ ಹಾಗೂ ಮೂರು ಯಂತ್ರಗಳಿಗೆ ವಿಸ್ತರಿಸಲಾಗಿದ್ದು, ಖಾಸಗಿ ಕಂಪೆನಿಗಳಿಗೆ ಸೆಡ್ಡು ಹೊಡೆಯುವಂತೆ ಕೆಎಸ್‌ಡಿಎಲ್ ಸಂಸ್ಥೆಯನ್ನು ಬಲಪಡಿಸಲಾಗಿದೆ. ಕನ್ನಡಿಗರು ಶ್ರಮದಿಂದ ಕಟ್ಟಿದ ಪ್ರತಿ ಸರ್ಕಾರಿ ಸಂಸ್ಥೆಯನ್ನು ಲಾಭದ ಹಳಿಗೆ ತರಲು ನಾವು ಬದ್ಧರಿದ್ದೇವೆ. ಇದು ನಮ್ಮವರ ಶ್ರಮ ಮತ್ತು ಬೆವರಿಗೆ ನಾವು ಕೊಡುವ ಗೌರವ ಎಂದಿದ್ದಾರೆ.

Previous articleಕಬಡ್ಡಿ ಹಬ್ಬದ ಲೋಗೋ ಬಿಡುಗಡೆ
Next articleಸರ್ಕಾರ ಗೂಂಡಾಗಳ ಪೋಷಣೆಗೆ ನಿಂತಂತಿದೆ