ಬೆಂಗಳೂರು: ಕನ್ನಡಕ್ಕೆ ಬಾವುಟ ನೀಡಿದ ವೀರ ಸೇನಾನಿ ಮ. ರಾಮಮೂರ್ತಿ ಅವರ ಪತ್ನಿ ಕಮಲಮ್ಮ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿತ್ತು.
ಪತಿ ರಾಮಾಮೂರ್ತಿ ಮತ್ತು ಮಕ್ಕಳಾದ ದಿವಾಕರ ಮತ್ತು ಮಂಜುನಾಥ ಅವರು ಬಾವಿ ಕುಸಿದು ಮೃತಪಟ್ಟ ಬಳಿಕ 58 ವರ್ಷಗಳಿಂದ ಕಮಲಮ್ಮ ಒಂಟಿಯಾಗಿದ್ದರು. ಇತ್ತೀಚೆಗೆ ಅವರು ಶ್ರೀಕೃಷ್ಣ ಸೇವಾಶ್ರಮದಲ್ಲಿ ಆಶ್ರಯ ಪಡೆದಿದ್ದರು. ಮೃತರ ಅಂತಿಮ ದರ್ಶನಕ್ಕೆ ಬನಶಂಕರಿ ಸೇವಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.