ಮಂಗಳೂರು: ನಟ ಡಾಲಿ ಧನಂಜಯ ಸ್ನೇಹಿತರ ಜೊತೆ ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
‘ಸಲಾರ್’ನಟ ನವೀನ್ ಶಂಕರ್ ಜೊತೆ ಡಾಲಿ ಧನಂಜಯ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ.
ನಟ ಡಾಲಿ ಅಣ್ಣ ಫ್ರಂ ಮೆಕ್ಸಿಕೋ, ಉತ್ತರಕಾಂಡ, ನಾಡಪ್ರಭು ಕೆಂಪೇಗೌಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿರುವ ಅವರು ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಧನಂಜಯ ಅವಕಾಶ ನೀಡುತ್ತಿದ್ದಾರೆ.