ಕಂಡಿಷನ್ ಹಾಕಿ ರಾಜೀನಾಮೆ ಕೊಡುವುದು ಮೂರ್ಖತನ

ನನ್ನ ನಿರ್ಧಾರವನ್ನ ಶುಕ್ರವಾರ ತಿಳಿಸುತ್ತೇನೆ ಎಂದ ಶಾಸಕ ಯತ್ನಾಳ್ 

ಮಂಗಳೂರು: ಸಚಿವ ಶಿವಾನಂದ ಪಾಟೀಲ್​ ಕಂಡಿಷನ್ ಹಾಕಿ ರಾಜೀನಾಮೆ ಕೊಟ್ಟಿದ್ದು ಮೂರ್ಖತನ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ
ಯತ್ನಾಳ್ ಅವರು ನೀಡಿದ್ದ ಸವಾಲನ್ನು ಸ್ವಿಕರಿಸಿದ ಶಿವಾನಂದ ಪಾಟೀಲ್​ ಇಂದು ಸ್ಪೀಕರ್ ಯು.ಟಿ ಖಾದರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಇಷ್ಟು ಉದ್ದ ರಾಜೀನಾಮೆ ಪತ್ರ ಎಂದಾದರೂ ಕೊಟ್ಟಿದಾರಾ? ಅವರಿಗೆ ಮಾನ ಮರ್ಯಾದೆ ಏನೂ ಇಲ್ಲ ಅದು ದಡ್ಡತನ. ಎರಡು ಲೈನ್​ನಲ್ಲಿ ರಾಜೀನಾಮೆ ಪತ್ರ ಕೊಡುತ್ತಾರೆ. ಕಂಡಿಷನ್ ಹಾಕಿ ರಾಜೀನಾಮೆ ಕೊಡುವುದು ಮೂರ್ಖತನ. ಮರ್ಯಾದೆ ಇಲ್ಲದವರು ಮಾಡುವ ಕೆಲಸವನ್ನು ಅವರು ಮಾಡಿದ್ದಾರೆ. ನಾನು ನನ್ನ ನಿರ್ಧಾರವನ್ನ ಶುಕ್ರವಾರ ತಿಳಿಸುತ್ತೇನೆ ಎಂದಿದ್ದಾರೆ.