ಒನ್ ನೇಷನ್ ಒನ್ ಎಲೆಕ್ಷನ್ ಸ್ಲೋಗನ್ ಆಗಬಾರದು

0
19

ಬೆಳಗಾವಿ: ಒನ್ ನೇಷನ್ ಒನ್ ಎಲೆಕ್ಷನ್ ಕುರಿತಂತೆ ಮಾಜಿ ಪ್ರಧಾನಿ ದಿ. ನೆಹರು ಅವರು 1964 ರಲ್ಲಿ ಈ‌ ಕುರಿತು ಕಲ್ಪನೆ ಮಾಡಿದ್ದರು ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಒನ್ ನೇಷನ್ ಒನ್ ಎಲೆಕ್ಷನ್ ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ. ಮೇಲ್ನೋಟದಲ್ಲಿ ಚನ್ನಾಗಿ ಕಾಣುತ್ತಿದೆ ಆದರೆ ಡಿಜಿಟಲ್ ಇಂಡಿಯಾ, ಖೊಲೋ‌ ಇಂಡಿಯಾ, ಮೆಕ್ ಇನ್ ಇಂಡಿಯಾ ಕೇವಲ ಘೋಷಣೆಗಳಾಗಿವೆ. ಇವರು ಮಾಡಿರುವ ಎಲ್ಲಾ‌ ಘೋಷಣೆಗಳ ಪರಿಣಾಮ ಏನಾಗಿದೆ ಎಂದು ಹೇಳಲಿ, ಇವುಗಳ ಮೇಲೆ ಅಭಿವೃದ್ಧಿ ಏನಾಗಿದೆ ಎಂದು ಹೇಳಲಿ, ಮೇಕ್ ಇನ್ ಇಂಡಿಯ ಏನಾಯ್ತು? ” ಒನ್ ನೇಷನ್ ಒನ್ ಎಲೆಕ್ಷನ್ ಸ್ಲೋಗನ್ ಆಗಬಾರದು. ಇದು ಕೇವಲ ಪ್ರಚಾರ ಆಗಬಾರದು. ವಾಟ್ಸಪ್‌ ಟ್ವಿಟರ್‌ಗಳಿಗೆ ಮಾತ್ರ ಮೆಕ್ ಇನ್ ಇಂಡಿಯಾ ಸಿಮಿತವಾಗಿದೆ, ಕೇಂದ್ರ ಸರ್ಕಾರವು ಯೋಜನೆ ಹೆಸರಿನಲ್ಲಿ ಅಭಿವೃದ್ಧಿಗಿಂತ ಪ್ರಚಾರ ಹೆಚ್ಚು ಮಾಡುತ್ತಿದೆ. 11 ವರ್ಷಗಳಿಂದ ಇದೆ ನಡೆಸುತ್ತಿದೆ, ಸದನದಲ್ಲಿ ವಕ್ಫ್ ಚರ್ಚೆ ವಿಚಾರವಾಗಿ ನಾವು ಚರ್ಚೆಗೆ ತಯಾರಿದ್ದೇವೆ. ವಿರೋಧ ಪಕ್ಷಗಳು ವಕ್ಫ್ ಕುರಿತು ಯಾವುದೇ ದಾಖಲೆ ಇಲ್ಲದೆ ಮಾತನಾಡುತ್ತಿದ್ದಾರೆ. ವಕ್ಪ್ ಅನಾನುಕೂಲವಾಗಿದೆ ಎಂದು ದಾಖಲೆ ನೀಡಲಿ ಎಂದರು.

Previous articleಖರ್ಗೆ-ಧನಕರ್ ನಡುವೆ ಮಾತಿನ ಚಕಮಕಿ: ಕಲಾಪ ಸೋಮವಾರಕ್ಕೆ ಮುಂದೂಡಿಕೆ
Next articleನಟ ದರ್ಶನ್, ಪವಿತ್ರಾಗೌಡ ಸೇರಿ 7 ಮಂದಿಗೆ ಜಾಮೀನು