ಬೆಂಗಳೂರು: ಪಿ.ಎಸ್.ಐ ಆಗಿ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಭಿನಂದನೆ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಪಿಎಸ್‌ಐ 545ರ ಮರು ಪರೀಕ್ಷೆ (ಜನವರಿ 23, 2024) ನಡೆದು ಸುಮಾರು 9 ತಿಂಗಳಾದರೂ ಆಯ್ಕೆ ಪಟ್ಟಿ ಪ್ರಕಟಿಸದೆ ಹೊಣೆಗೇಡಿತನ ಪ್ರದರ್ಶಿಸುತ್ತಿದ್ದ ರಾಜ್ಯ ಸರ್ಕಾರ ಇಂದು ಅಭ್ಯರ್ಥಿಗಳ ಹಾಗೂ ನಮ್ಮೆಲ್ಲರ ಒತ್ತಡಕ್ಕೆ ಮಣಿದು ಇಂದು ಪಟ್ಟಿ ಬಿಡುಗಡೆ ಮಾಡಿದೆ. ಪಿ.ಎಸ್.ಐ ಆಗಿ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೂ ಅಭಿನಂದನೆಗಳು, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಪರೀಕ್ಷೆ ನಡೆದ 100 ದಿನಗಳಲ್ಲಿ ಪ್ರಕಟಿಸಬೇಕು. ಅನಾವಶ್ಯಕವಾಗಿ, ಪರೀಕ್ಷಾರ್ಥಿಗಳಿಗೆ ಗೊಂದಲ ಮೂಡಿಸಬಾರದು. ಪರೀಕ್ಷೆ ನಡೆಸುವ ಸಕ್ಷಮ ಪ್ರಾಧಿಕಾರ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳಲಿ. ಈ ವ್ಯವಸ್ಥೆ ಪರೀಕ್ಷಾರ್ಥಿ ಸ್ನೇಹಿಯಾಗಿರಬೇಕೇ ಹೊರತು ಪಟ್ಟಭದ್ರರ ಪರವಾಗಿರಬಾರದು ಎಂದಿದ್ದಾರೆ.