ಒಂದೇ ಕುಟುಂಬದ ಮೂವರ ಆತ್ಮಹತ್ಯೆ

0
7

ಗದಗ: ಕೃಷಿ ಚಟುವಟಿಕೆಗಳಿಗಾಗಿ ಖರೀದಿಸಿದ ಟ್ರ್ಯಾಕ್ಟರ್‌ ಸಾಲ ಭರಿಸುವದಕ್ಕಾಗಿ ಮನೆಯಲ್ಲಿ ಉಂಟಾದ ಕಲಹದಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಲಹದಿಂದ ಬೇಸತ್ತಿದ್ದ ಮಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನನ್ನು ಉಳಿಸಲು ಹೋಗಿ ಆತನ ತಾಯಿಯೂ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ತಾಯಿ ಹಾಗೂ ತಮ್ಮನ ಸಾವಿನ ಸುದ್ದಿ ಕೇಳಿ ಹಿರಿಯ ಸಹೋದರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಗಳನ್ನು ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದ ತೇಲಿ ಕುಟುಂಬದ ಮಂಜುನಾಥ ತೇಲಿ(೨೬), ಸಾವಕ್ಕ ತೇಲಿ (೪೦), ರೇಣವ್ವ (೩೯) ಎಂದು ಗುರುತಿಸಲಾಗಿದೆ.

Previous articleಜಿಲ್ಲೆಗೆ ಬೇರೆಯವರನ್ನು ತರುವುದನ್ನು ನಿಲ್ಲಿಸಿ…
Next articleಇಬ್ಬರು ಶೂಟರ್ ಬಂಧನ