Home Advertisement
Home ತಾಜಾ ಸುದ್ದಿ ಒಂದು ತಿಂಗಳವರೆಗೆ ಹುಬ್ಬಳ್ಳಿ- ಮುಂಬೈ ಇಂಡಿಗೊ ವಿಮಾನ ಸಂಚಾರ ರದ್ದು

ಒಂದು ತಿಂಗಳವರೆಗೆ ಹುಬ್ಬಳ್ಳಿ- ಮುಂಬೈ ಇಂಡಿಗೊ ವಿಮಾನ ಸಂಚಾರ ರದ್ದು

0
53

ಹುಬ್ಬಳ್ಳಿ: ಬುಧವಾರದಿಂದ ಒಂದು ತಿಂಗಳವರೆಗೆ ಹುಬ್ಬಳ್ಳಿ- ಮುಂಬೈ ವಿಮಾನ ಸಂಚಾರವನ್ನು ಇಂಡಿಯೋ ಸಂಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ದಟ್ಟಣೆ ವಿಪರೀತವಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಒಂದು ತಿಂಗಳ ಕಾಲ ಹುಬ್ಬಳ್ಳಿಯಿಂದ ಮುಂಬೈಗೆ ತೆರಳುತ್ತಿದ್ದ ವಿಮಾನ ಸಂಚಾರವನ್ನು ಮುಂಬೈ ವಿಮಾನ ನಿಲ್ದಾಣ ಪ್ರಾಧಿಕಾರದ ಸೂಚನೆಯನ್ವಯ ರದ್ದುಗೊಳಿಸಲಾಗಿದೆ ಎಂದು ಹುಬ್ಬಳ್ಳಿಯಲ್ಲಿರುವ ಇಂಡಿಗೋ ವಿಮಾನಯಾನ ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.

ಬುಧವಾರ ಸಂಜೆ ಸೂಚನೆ ಬಂದಿದ್ದು, ತಕ್ಷಣದಿಂದ ಮುಂಬೈಗೆ ವಿಮಾನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಮುಂಗಡ ಟಿಕೇಟ್ ಬುಕ್ಕಿಂಗ್ ಮಾಡಿದ ಪ್ರಯಾಣಿಕರೊಂದಿಗೆ ಸಂಪರ್ಕ ¸ Áಧಿಸಿ ಮಾಹಿತಿ ನೀಡಲಾಯಿತು. ಕೆಲವರು ಟಿಕೇಟ್ ರದ್ದುಪಡಿಸಿದರೆ ಅನೇಕರು ಪರ್ಯಾಯ ಮಾರ್ಗ ಅಂದರೆ, ಬೆಂಗಳೂರು, ಪುಣೆ ಮಾರ್ಗವಾಗಿ ಮುಂಬೈಗೆ ತೆರಳಲು ಟಿಕೇಟ್ ಬದಲಾಯಿಸಿಕೊಂಡರು.
ಅಂತಹ ಪ್ರಯಾಣಿಕರ ಅನುಕೂಲ ಮಾಡಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Previous articleಕೇಂದ್ರದ ಅನುದಾನ ಪಡೆಯಲು ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟ
Next articleಲೋಕಾ ಬಲೆಗೆ ಮುಖ್ಯಶಿಕ್ಷಕ