ವಕ್ಫ್ ತಿದ್ದುಪಡಿ ಮಸೂದೆ ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧವಲ್ಲ. ಈ ಮಸೂದೆ ಯಾವುದೇ ಕಾನೂನು ಸಹಾಯವಿಲ್ಲದೆ ಅನಿಯಂತ್ರಿತವಾಗಿ ನಿಯಮಗಳನ್ನು ಹೇರುವುದರ ವಿರುದ್ಧವಾಗಿದೆ, ಇದರಿಂದಾಗಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರನ್ನು ರಕ್ಷಿಸಲಾಗುತ್ತದೆ. ದರ್ಗಾ ಅಜ್ಮೀರ್ ಷರೀಫ್ ಅಧ್ಯಕ್ಷರು, ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನ ಮತ್ತು ಕೇರಳ ಕ್ಯಾಥೋಲಿಕ್ ಬಿಷಪ್‌ಗಳ ಮಂಡಳಿಯು ವಕ್ಫ್ ಮಸೂದೆಯನ್ನು ಬೆಂಬಲಿಸಿವೆ.
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ ಅಲ್ಪಸಂಖ್ಯಾತರಾಗಲಿ ಅಥವಾ ಯಾವುದೇ ಇತರ ಸಮುದಾಯದವರ ಆಸ್ತಿಗಳನ್ನು ಅನಿಯಂತ್ರಿತತೆಯಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ನನ್ನ ಪಕ್ಕದ ಕ್ಷೇತ್ರದ ಮುಸ್ಲಿಂ ವ್ಯಕ್ತಿಯೊಬ್ಬರ ಆಸ್ತಿಯ ಎಲ್ಲಾ ಕಾನೂನು ದಾಖಲೆಗಳಿವೆ ಆದರೂ ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ.
ಚಾಲುಕ್ಯರ ಅವಧಿಯಲ್ಲಿ, 17 ಮತ್ತು 18 ನೇ ಶತಮಾನಗಳಲ್ಲಿ ಐತಿಹಾಸಿಕವಾಗಿ ನಿರ್ಮಿಸಲಾದ ದೇವಾಲಯಗಳನ್ನು ವಕ್ಫ್ ವಶಪಡಿಸಿಕೊಂಡಿದೆ. ನನ್ನ ಕ್ಷೇತ್ರದ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಶೇ.90% ಮುಸ್ಲಿಂ ಜನಸಂಖ್ಯೆ ವಾಸಿಸುವ ಪ್ರದೇಶದಲ್ಲಿ, ಜನರು ತಮ್ಮ ಹಕ್ಕಿನ ಆಸ್ತಿಗಾಗಿ ವಕ್ಫ್ ವಿರುದ್ಧ ಹೋರಾಟದಲ್ಲಿ ತೊಡಗಿದ್ದಾರೆ. ಇದು ಜನರಲ್ಲಿ ಗೊಂದಲ ಮತ್ತು ಆತಂಕ ಸೃಷ್ಟಿಯಾಗಿದೆ.
ವಕ್ಫ್ ಮಂಡಳಿಗಳ ಅನಿಯಂತ್ರಿತತೆಯ ವಿರುದ್ಧ ಹೋರಾಡುತ್ತಿರುವ ಅಲ್ಪಸಂಖ್ಯಾತರು ಹಾಗೂ ಬೇರೆ ಎಲ್ಲರ ಹಕ್ಕುಗಳನ್ನು ರಕ್ಷಿಸಲು, ಜನ ಪರ ಹಾಗೂ ಅವರ ಧನಿಯನ್ನು ಆಲಿಸಿ ಮತ್ತು ನ್ಯಾಯಯುತ ಪರಿಹಾರವನ್ನು ಖಚಿತಪಡಿಸಲು ನಾವು ಬದ್ಧರಾಗಿದ್ದೇವೆ ಎಂದರು.