ಏತ ನೀರಾವರಿ ಪೈಪ್‌ಲೈನ್ ಲಿಕೇಜ್: ಸಿಲುಕಿಕೊಂಡ ಅಕ್ಕಿ ತುಂಬಿದ ಲಾರಿ

0
18

ದಾವಣಗೆರೆ: ಅಕ್ಕಿ ಲೋಡ್ ಮಾಡಿಕೊಂಡು ಹೊರಟ್ಟಿದ್ದ ಲಾರಿಯೊಂದು ಲೋಕಿಕೆರೆ ರಸ್ತೆಯ ಫ್ಲೈ ಓವರ್ ಕೆಳಗಿನ ರಸ್ತೆ ಬದಿ ಸಿಕ್ಕಿಕೊಂಡು ವಾಲಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಲೋಕಿಕೆರೆ ರಸ್ತೆಯ ಕೈಗಾರಿಕಾ ಪ್ರದೇಶದ ರೈಸ್ ಮಿಲ್‌ನಲ್ಲಿ ಅಕ್ಕಿ ಲೋಡ್ ಮಾಡಿಕೊಂಡು ಹಾಸನಕ್ಕೆ ಹೊರಟ್ಟಿತ್ತು. ಕೈಗಾರಿಕಾ ಪ್ರದೇಶದಿಂದ ದಾವಣಗೆರೆ ನಗರಕ್ಕೆ ಬರುವ ರಸ್ತೆಯಿಂದ ಬಲ ಭಾಗಕ್ಕೆ ತಿರುಗಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯಲ್ಲಿ ಜಲಸಿರಿ ಮತ್ತು 22 ಕೆರೆ ಏತ ನೀರಾವರಿ ಯೋಜನೆ ಹೋಗಿರುವ ಪೈಪ್‌ಲೈನ್ ಲಿಕೇಜ್ ಆಗಿರುವ ಸ್ಥಳದಲ್ಲಿ ಲಾರಿ ಹಿಂಬದಿಯ ಬಲ ಭಾಗದ ಎರಡು ಚಕ್ರಗಳು ಸಿಲುಕಿಕೊಂಡಿದೆ. ಕಾರಣ ರಾತ್ರಿ ಸುರಿದ ಮಳೆ ಮತ್ತು ಮೊದಲೇ ಲಿಕೇಜ್ ಆಗಿ ನೀರು ಚಿಮ್ಮಿರುವುದೇ ಲಾರಿಯ ಚಕ್ರಗಳು ಸಿಲುಕಿಕೊಳ್ಳಲು ಕಾರಣ ಎನ್ನಲಾಗಿದೆ.
ಜೆಸಿಬಿ ಯಂತ್ರದಿಂದ ಮೇಲೆತ್ತಲು ಆಗುತ್ತಿಲ್ಲ. ಕ್ರೇನ್ ನಿಂದ ಅಥವಾ ಅಕ್ಕಿ ಆನ್ ಲೋಡ್ ಮಾಡಿ ಲಾರಿಯ ಚಕ್ರಗಳನ್ನು ಹೊರಗೆ ತೆಗೆಯಬೇಕಾಗಿದೆ. ಒಡೆದ ಪೈಪ್ ಲೈನ್ ದುರಸ್ತಿ ಮಾಡುವಂತೆ ಈ ಭಾಗದ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

Previous articleಜನಿವಾರ ವಿವಾದ: ಮಂತ್ರಾಲಯ ಶ್ರೀ ಅಸಮಾಧಾನ
Next articleಶಿಕ್ಷಣದಿಂದ ಸ್ವಾಭಿಮಾನದ ಬದುಕು ಸಾಧ್ಯ