ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ: ಐವರ ಬಂಧನ, 220 ಗ್ರಾಂ ಬಂಗಾರ ವಶ

0
12

ದಾವಣಗೆರೆ: ಬೆಳ್ಳಂಬೆಳ್ಳಗೆ ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಜಿಲ್ಲೆಯ ನ್ಯಾಮತಿ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದ ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಪ್ರಮುಖ ಆರೋಪಿಗಳಾದ ವಿಜಯಕುಮಾರ್, ಅಜಯ್‌ಕುಮಾರ್, ಅಭಿಷೇಕ, ಮಂಜುನಾಥ್, ಚಂದ್ರು ಅವರನ್ನು ಬಂಧಿಸಿ, ಅವರಿಂದ 220 ಗ್ರಾಂ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಮಿಳುನಾಡು ಮೂಲದ ವಿಜಯಕುಮಾರ್, ಅಜಯ್‌ಕುಮಾರ್ ಮತ್ತು ಪರಮಾನಂದ, ಸುಮಾರು ವರ್ಷಗಳಿಂದ ನ್ಯಾಮತಿ ಪಟ್ಟಣದಲ್ಲಿ ಬೇಕರಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಅದೇ ರೀತಿ ಮಂಜುನಾಥ್, ಅಭಿಷೇಕ ಮತ್ತು ಚಂದ್ರು ಹೊನ್ನಾಳಿ ಮತ್ತು ನ್ಯಾಮತಿಯವರು. ಇನ್ನೊಬ್ಬ ಪರಮಾನಂದ ಅವರನ್ನು ಪತ್ತೆ ಮಾಡಬೇಕಾಗಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್ ದರೋಡೆ ಸಂದರ್ಭದಲ್ಲಿ 13 ಕೋಟಿ ಮೌಲ್ಯದ 17 ಕೆ.ಜಿ. ಬಂಗಾರ ಕಳುವಾಗಿದೆ ಎಂದು 2024ರ ಅಕ್ಟೋಬರ್ 26ರಂದು ನ್ಯಾಮತಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಳೆದ ರಾತ್ರಿ ಬಂಧಿಸಿರುವುದರಿಂದ ಇನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ. ಎಷ್ಟೆಷ್ಟು ಪ್ರಕರಣಗಳಲ್ಲಿ ಭಾಗಿ, ಎಷ್ಟು ಬಂಗಾರ ಕಳವು ಮಾಡಿದ್ದಾರೆ ಎಂಬ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ತಿಳಿಸಿದರು.

Previous articleಬಹುನಿರೀಕ್ಷಿತ ವಾಮನ ಚಿತ್ರದ ಟ್ರೇಲರ್​ಅನಾವರಣ
Next articleದರೋಡೆ ಪ್ರಕರಣ: ಕಾಲಿಗೆ ಗುಂಡೇಟು ತಿಂದ ಆರೋಪಿ ವಿರುದ್ಧ 54 ಪ್ರಕರಣ